ಕಾಸರಗೋಡು: ಸುಲ್ತಾನ್ ಗೋಲ್ಡ್ ನಿಂದ ಕೋಟ್ಯಂತರ ಮೌಲ್ಯದ ವಜ್ರಾಭರಣ ದೋಚಿದ ಪ್ರಕರಣ: ಓರ್ವನ ಬಂಧನ
Update: 2021-12-11 11:53 IST
ಕಾಸರಗೋಡು, ಡಿ.11: ನಗರದ ಸುಲ್ತಾನ್ ಗೋಲ್ಡ್ ಜುವಲ್ಲರಿಯಿಂದ ಸುಮಾರು 2.88 ಕೋಟಿ ರೂ. ಮೌಲ್ಯದ ವಜ್ರಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಇಮ್ರಾನ್ ಶಾಫಿ (36) ಬಂಧಿತ ಆರೋಪಿ. ಈತ ಪ್ರಕರಣದ ಪ್ರಮುಖ ಆರೋಪಿ ಫಾರೂಕ್ ಎಂಬಾತನ ಸಹೋದರ ಎಂದು ಪೊಲೀಸರು ತಿಳಿಸಿದ್ದಾರೆ. ಫಾರೂಕ್ ತಲೆಮರೆಸಿಕೊಂಡಿದ್ದಾನೆ.
ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣ ನ್ ನಾಯರ್ ನೇತೃತ್ವದ ತಂಡವು ಈತನನ್ನು ಬೆಂಗಳೂರಿನಿಂದ ಬಂಧಿಸಿದೆ.
ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ಬಳಿಕ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.