×
Ad

ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ, ರಕ್ಷಕ ಸಭೆ

Update: 2021-12-11 16:27 IST

ಗೋಳ್ತಮಜಲು: ಮಕ್ಕಳ ಮೆದುಳು ಬಾಲ್ಯದಲ್ಲೇ ಭಿನ್ನ ವಿಭಿನ್ನವಾಗಿ ಕಾರ್ಯಾಚರಿಸುತ್ತಿರುವಾಗ  ಹೆತ್ತವರು ಶಿಕ್ಷಕರು ಪ್ರಮುಖವಾಗಿ ಮಕ್ಕಳ ಮೆದುಳಿಗೆ ಸತ್ಯವನ್ನೇ ತುಂಬಿಸಿರಿ ಎಂದು ಮಾನಸಿಕ ಆರೋಗ್ಯ ಅಭಿವೃದ್ಧಿ ತರಬೇತಿ ಅಧಿಕಾರಿ ಮಮತಾ ಭಂಡಾರಿ ಅಭಿಪ್ರಾಯ ಪಟ್ಟರು.

ಅವರು ಇಂದು‌(ಶನಿವಾರ) ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಶಿಕ್ಷಕ ರಕ್ಷಕ ಸಂಘದ ಸಭೆಯಲ್ಲಿ ಮಾತಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಕಲ್ಲಡ್ಕ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಖತೀಬ್  ಶೇಖ್ ಮಹಮ್ಮದ್ ಇರ್ಫಾನಿ ಮಾತಾಡಿ ಶಿಕ್ಷಕರು ಹಾಗೂ ರಕ್ಷಕರು ಜೊತೆ ಜೊತೆಯಾಗಿ ಮುನ್ನಡೆದಲ್ಲಿ ಮಕ್ಕಳ ಅಭಿವೃದ್ಧಿಯ ಕೊಡುಗೆ ಎಂದರು.

ವೇದಿಕೆಯಲ್ಲಿ ಫಾತಿಮ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್ ಇದರ ಸಂಚಾಲಕ ಹಾಜಿ.ಜಿ.ಅಹ್ಮದ್ ಮುಸ್ತಫಾ, ಶಿಕ್ಷಕ ರಕ್ಷಕ ಸಂಘದ ಅದ್ಯಕ್ಷರಾದ ಹಮೀದ್ ಅಲಿ,ಉಪಾಧ್ಯಕ್ಷರಾದ ಪುಷ್ಪಾ,ಮಕ್ಕಳ ಸುರಕ್ಷಾ ಸಮಿತಿಯ ಸಲಹೆಗಾರ ಅಬ್ದುಲ್ ಹಮೀದ್ ಗೋಳ್ತಮಜಲು, ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು  ಫಾತಿಮ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ ಆಡಳಿತ ಸಮಿತಿ ಅಧ್ಯಕ್ಷರಾದ ಹಾಜಿ.ಜಿ ಮಹಮ್ಮದ್ ಹನೀಫ್ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ನಿರಂಜನ್.ಡಿ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ತಾಹಿರ.ಎಸ್ ಸ್ವಾಗತಿಸಿದರು. ಕೃತಿಕಾ ವಂದಿಸಿ,  ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News