ಪುತ್ತೂರು: ಕರ್ನಾಟಕ ಪ್ರತಿಭಾ ರತ್ನ ಗೌರವಕ್ಕೆ ಅಖಿಲಾ ಶೆಟ್ಟಿ ದೇರ್ಲ ಆಯ್ಕೆ
Update: 2021-12-11 17:50 IST
ಪುತ್ತೂರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಕರ್ನಾಟಕ ಪ್ರತಿಭಾ ರತ್ನ ಗೌರವಕ್ಕೆ ಅಖಿಲಾ ಶೆಟ್ಟಿ ದೇರ್ಲ ಆಯ್ಕೆಯಾಗಿದ್ದಾರೆ . ದ.18 ರಂದು ಶ್ರವಣಬೆಳಗೊಳದ ಜೈನ ಮಠದ ಆವರಣದ ತುಳುವ ವೇದಿಕೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ ಅಖಿಲಾ ಶೆಟ್ಟಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಭಾಷಣ, ಪ್ರಬಂಧ,ಕಥೆ ಹಾಗೂ ಕವನ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಅವರು ಇದುವರೆಗೆ ಐವತ್ತಕ್ಕೂ ಹೆಚ್ಚು ಸಾಧಕರ ಪರಿಚಯ ಲೇಖನ ಮಾಡಿರುತ್ತಾರೆ. ಕನ್ನಡ ಕರಾವಳಿ ಸಮ್ಮಿಲನ ವೇದಿಕೆಯ ಅಧ್ಯಕ್ಷೆಯಾಗಿದ್ದು ಅವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಈ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಅಖಿಲಾ ಶೆಟ್ಟಿ ಅವರು ದೇರ್ಲ ಜಯರಾಮ ಶೆಟ್ಟಿ ಹಾಗೂ ಇಂದಿರಾ.ಜೆ ಶೆಟ್ಟಿ ದಂಪತಿಯ ಪುತ್ರಿ.