ಮುಸ್ಲಿಂ ಎಜುಕೇಶನಲ್ ಇನ್ಸ್ ಟ್ಯೂಟ್ ಫೆಡರೇಶನ್ ವತಿಯಿಂದ ಶಿಕ್ಷಕರಿಗಾಗಿ ಪುನಶ್ಚೇತನಾ ಕಾರ್ಯಗಾರ
ಮಂಗಳೂರು: ಮುಸ್ಲಿಂ ಎಜುಕೇಶನ್ ಇನ್‍ಸ್ಟಿಟ್ಯೂಟ್ ಫೆಡರೇಶನ್ ಹಾಗೂ ಮಿಸ್ಬಾಹ್ ಮಹಿಳಾ ಕಾಲೇಜು ಕಾಟಿಪಳ್ಳ ಇದರ ಸಹಯೋಗದೊಂದಿಗೆ ಮಿಸ್ಬಾಹ್ ಸಭಾಂಗಣದಲ್ಲಿ ಶಾಲಾ ಶಿಕ್ಷಕರಿಗಾಗಿ ಪುನಶ್ಚೇತನಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಂಗಳೂರು ಉತ್ತರದ ಬ್ಲಾಕ್ ಸಂಪನ್ಮೂಲ ಸಂಚಾಲಕರಾದ ಜಿ. ಉಸ್ಮಾನ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೊರೋನ ಸಾಂಕ್ರಾಮಿಕದಿಂದಾಗಿ ಆನ್ಲೈನ್ ತರಗತಿಗಳನ್ನು ಮಾಡಿದ್ರೂ ಅದು ಪರಿಣಾಮಕಾರಿಯಾಗಿರಲಿಲ್ಲ ಎಂಬುದು ಶಾಲೆ ಪುನರಾರಂಭದಿಂದಾಗಿ ಮನವರಿಕೆಯಾಗಿದೆ. ಹಾಗಾಗಿ ಇಂತಹ ಕಾರ್ಯಕ್ರಮಗಳು ಶಿಕ್ಷಕರನ್ನು ಪುನಶ್ಚೇತನಗೊಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.
MEIF ಸಂಸ್ಥೆ ವತಿಯಿಂದ ಶಿಕ್ಷಕರಿಗಾಗಿ ಪುನಶ್ಚೇತನಾ ಕಾರ್ಯಾಗಾರದಲ್ಲಿ ಮಾತನಾಡಿದ ಮೋಟಿವೈಟಲ್ ಕಲ್ಚರ್ ನ ವ್ಯವಸ್ಥಾಪಕ ನಿರ್ದೇಶಕರಾದ ನಸ್ರೀನ್ ಬಿನ್ತ್ ಅಹಮ್ಮದ್ ಬಾವಾ ಅವರು, ಶಿಕ್ಷಕರು ಮಕ್ಕಳ ಬೆಳವಣಿಗೆಯ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಕಾರಣಕರ್ತರು ಹಾಗಾಗಿ ಸೌಹಾರ್ದಯುತ ಸಮಾಜವನ್ನು ಕಟ್ಟುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.
ಮುಸ್ಲಿಂ ಎಜುಕೇಶನ್ ಇನ್ಸ್‍ಟಿಟ್ಯೂಶನ್ ಫೆಡರೇಶನ್ ಅಧ್ಯಕ್ಷರಾದ ಮೂಸಬ್ಬ ಪಿ.ಬ್ಯಾರಿ ಅವರು ಅಧ್ಯಕ್ಷೀಯ ಮಾತುಗಳನ್ನಾಡಿ ಇಂತಹ ಕಾರ್ಯಕ್ರಮಗಳನ್ನು MEIFನ ವತಿಯಿಂದ ಶಿಕ್ಷಕರಿಗಾಗಿ ಮುಂದಿನ ದಿನಗಳಲ್ಲಿ ನಡೆಸಲಾಗುತ್ತದೆ ಎಂದರು.
ಮಿಸ್ಬಾಹ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ MEIF ಉಪಾಧ್ಯಕ್ಷರೂ ಆಗಿರುವ ಅಲ್ ಹಾಜ್ ಬಿ. ಎಂ ಮುಮ್ತಾಜ್ ಅಲಿಯವರು ಸ್ವಾಗತಿಸಿದರು.
ಸಭಾಕಾರ್ಯಕ್ರಮದ ನಂತರ ರಾಷ್ಟೀಯ ಮಟ್ಟದ ತರಬೇತುದಾರ ಫ್ರೊ. ರಾಜೇಂದ್ರ ಭಟ್ ಅವರಿಂದ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು. MEIF ನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 14 ಶಾಲೆಗಳಿಂದ 120 ಶಿಕ್ಷಕರು ಹಾಗೂ ಶಾಲಾ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಮೋಟಿವೈಟಲ್‍ನ ಅಧ್ಯಕ್ಷರಾದ ಎಂ .ಎಸ್ ಬಾಷಾ ಹಾಗೂ ಉಪಾಧ್ಯಕ್ಷರಾದ ಹಸನ್ ತೌಶೀದ್ MEIF ನ ಪ್ರಧಾನ ಕಾರ್ಯದರ್ಶಿಯಾದ ಬಿ.ಎ ನಝೀರ್, ಜೊತೆ ಕಾರ್ಯದರ್ಶಿಯಾದ ಪಿ.ಎ ಇಲ್ಯಾಸ್, ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್ ಕಾರ್ಯಕ್ರಮ ನಿರ್ವಾಹಕರುಗಳಾದ ಬಿ.ಎ ಇಕ್ಬಾಲ್, ಟ್ಯಾಲೆಂಟ್ ರಿಯಾಝ್, ಹಕೀಂ ಪಾಲ್ಕನ್, ಮಿಸ್ಬಾಹ್ ಕಾಲೇಜಿನ ಪ್ರಾಂಶುಪಾಲರಾದ ಝಾಹೀದಾ ಜಲೀಲ್ ಮತ್ತು ಅಲ್ ಬದ್ರೀಯ ಪ್ರಾಂಶುಪಾಲರಾದ ವಿಲ್ಮ ಉಪಸ್ಥಿತರಿದ್ದರು.
ಮಿಸ್ಬಾಹ್ ಕಾಲೇಜಿನ ಉಪನ್ಯಾಸಕಿಯರಾದ ಮಮತ ಮತ್ತು ನೌಶೀನ್ ಕಾರ್ಯಕ್ರಮ ನಿರೂಪಿಸಿದರು.