×
Ad

ಪಟ್ಟಣ ಪಂಚಾಯತ್ ಚುನಾವಣೆ: ಕೋಟೆಕಾರ್ ಪಂಚಾಯತ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2021-12-11 19:53 IST

ಮಂಗಳೂರು, ಡಿ.11; ಕೋಟೆಕಾರ್ ಪಟ್ಟಣ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ ಎಂದು ದ.ಕ.ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

17 ವಾರ್ಡುಗಳಿಗೆ ರಾಘವಗಟ್ಟಿ, ಭವಾನಿ ದೇವದಾಸ್, ಸುಜಿತ್ ಮಾಡೂರು, ರಮೇಶ್, ಪ್ರವೀಣ್ ಬಗಂಬಿಲ, ದಿವ್ಯ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಯಶವಂತ ಆಳ್ವ, ಅನಿತಾ ಕುಲಾಲ್, ಧೀರಜ್,ವಿಶ್ವನಾಥ ಕುಲಾಲ್, ದಿವ್ಯಾ, ಮಾಲತಿ ಶೆಟ್ಟಿ, ಜಗದೀಶ್, ನವೀನ್ ಕೊಂಡಾಣ, ಮುಹಮ್ಮದ್ ಶರೀಫ್, ಅನಿತಾ ಸೇರಿದಂತೆ 17ಮಂದಿಯ ಹೆಸರು ಅಂತಿಮ ಗೊಳಿಸಲಾಗಿದೆ.

ವಿಟ್ಲ ಪಟ್ಟಣ ಪಂಚಾಯತ್ ಗೆ ಶೀಘ್ರವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸುದರ್ಶನ್ ತಿಳಿಸಿದ್ದಾರೆ.

ಡಿ.13ರಂದು ಕಾಶಿಯಲ್ಲಿ ನಡೆಯಲಿರುವ ಭವ್ಯ ಕಾಶಿ ದಿವ್ಯ ಕಾಶಿ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ಪ್ರತಿ ವಿಧಾನ ಸಭಾ ವ್ಯಾಪ್ತಿಯಲ್ಲಿ  ವ್ಯವಸ್ಥೆ ಮಾಡಲಾಗಿದೆ ಎಂದು ಸುದರ್ಶನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಜೆಪಿ ಮುಖಂಡರಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ, ನಿತಿನ್ ಕುಮಾರ್, ರವಿ ಶಂಕರ್ ಮಿಜಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News