ಉಡುಪಿ: ರಸ್ತೆ ಸುರಕ್ಷತಾ ಬ್ಯಾರಿಕೇಡ್ ಹಸ್ತಾಂತರ
Update: 2021-12-11 20:28 IST
ಉಡುಪಿ, ಡಿ.11: ಉಡುಪಿ ಎಂಜಿಎಂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವತಿಯಿಂದ ನೀಡಲಾದ ರಸ್ತೆ ಸುರಕ್ಷತಾ ಬ್ಯಾರಿಕೇಡ್‌ಗಳನ್ನು ಕಾಲೇಜಿನ ಮೂಲಕ ಉಡುಪಿ ಸಂಚಾರ ಪೋಲಿಸ್ ಠಾಣೆಗೆ ಇಂದು ಹಸ್ತಾಂತರಿಸಲಾಯಿತು.
ಮಾಹೆಯ ಪರ್ಚೇಸ್ ವಿಭಾಗದ ನಿರ್ದೇಶಕ ವರದರಾಜ್ ಪೈ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಎ.ಮಾಲತಿ ದೇವಿ, ಪದವಿ ಪೂರ್ವ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದರ್ಶನ್, ಕಾರ್ಯದರ್ಶಿ ವಿನಾಯಕ ಕಿಣಿ, ಖಜಾಂಚಿ ಸಂತೋಷ್ ಶೆಟ್ಟಿ ಹಿರಿಯಡ್ಕ, ಪದವಿ ಕಾಮರ್ಸ್ ವಿಭಾಗದ ವನಿತಾ ಮಯ್ಯ, ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.