×
Ad

ಭೋಪಾಲ್ ನಲ್ಲಿ ಕಾಮಿಡಿ ಶೋ ನಡೆಸಲು ಕುನಾಲ್ ಕಾಮ್ರ, ಮುನವ್ವರ್ ಫಾರೂಕಿಗೆ ದಿಗ್ವಿಜಯ ಸಿಂಗ್ ಆಹ್ವಾನ

Update: 2021-12-13 11:12 IST
ದಿಗ್ವಿಜಯ ಸಿಂಗ್

ಭೋಪಾಲ್: ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿದ ನಂತರ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕಾರ್ಯಕ್ರಮ ನಡೆಸಲು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಗಳಾದ ಕುನಾಲ್ ಕಾಮ್ರ ಹಾಗೂ  ಮುನವ್ವರ್ ಫಾರೂಕಿ ಅವರನ್ನು ಸೋಮವಾರ ಆಹ್ವಾನಿಸಿದ್ದಾರೆ.

ಸಂಘಪರಿವಾರ  ಸಂಘಟನೆಗಳ ಪ್ರತಿಭಟನೆಯ ನಡುವೆ ಕಳೆದ ತಿಂಗಳು ಕರ್ನಾಟಕದ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಲು ಫಾರೂಕಿಗೆ ಅನುಮತಿ ನಿರಾಕರಿಸಲಾಗಿತ್ತು.

ಸಂಘಟಕರಿಗೆ ಬೆದರಿಕೆ ಬಂದ ನಂತರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ತನ್ನ ಸ್ಟ್ಯಾಂಡ್-ಅಪ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಮ್ರ ಹೇಳಿದ್ದರು.

ಸೋಮವಾರ ಟ್ವಿಟರ್ ಪೋಸ್ಟ್ ನಲ್ಲಿ ದಿಗ್ವಿಜಯ ಸಿಂಗ್, "ನಾನು ಭೋಪಾಲ್ ನಲ್ಲಿ ಕುನಾಲ್ ಮತ್ತು ಮುನವ್ವರ್ ಗಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತೇನೆ. ಎಲ್ಲಾ ಜವಾಬ್ದಾರಿ ನನ್ನದಾಗಿರುತ್ತದೆ. ಕಾಮಿಡಿ ವಿಷಯ ದಿಗ್ವಿಜಯ ಸಿಂಗ್ ಆಗಿರಬೇಕು ಎನ್ನುವುದು ಏಕೈಕ ಷರತ್ತಾಗಿದೆ. ಸಂಘಿಗಳು ಇದನ್ನು ವಿರೋಧಿಸಬಾರದು!! ಭಯಪಡಬೇಡಿ!! ನಿಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ಮತ್ತು ಸಮಯವನ್ನು ನೀಡಿ. ನಿಮ್ಮ ಎಲ್ಲಾ ಷರತ್ತುಗಳನ್ನು ಸ್ವೀಕರಿಸಲಾಗಿದೆ." ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಪೋಸ್ಟ್ ನಲ್ಲಿ, ರಾಜ್ಯಸಭಾ ಸದಸ್ಯರು ಕಾಮ್ರಗೆ ಸಂಬಂಧಿಸಿದ ಸುದ್ದಿ ಲೇಖನವನ್ನು ಸಹ ಟ್ಯಾಗ್ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ  ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಿಜೆಪಿ ಶಾಸಕನೊಬ್ಬನ ಪುತ್ರನ ದೂರಿನ ಮೇರೆಗೆ ಫಾರೂಕಿ ಮಧ್ಯಪ್ರದೇಶದ ಇಂದೋರ್ ನಲ್ಲಿ ಒಂದು ತಿಂಗಳು ಜೈಲಿನಲ್ಲಿ ಕಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News