×
Ad

ಭಟ್ಕಳ: ಆ್ಯಂಬುಲೆನ್ಸ್ - ಬೈಕ್ ನಡುವೆ ಅಪಘಾತ; ಬೈಕ್ ಸವಾರ ಮೃತ್ಯು

Update: 2021-12-13 18:20 IST

ಭಟ್ಕಳ: ಆ್ಯಂಬುಲೆನ್ಸ್ ಮತ್ತು ಬೈಕ್ ನಡುವೆ ಸರ್ಪನಕಟ್ಟೆ ಬಳಿ ರಾ.ಹೆ.66ರಲ್ಲಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತ ಬೈಕ್ ಸವಾರನನ್ನು ಕೋಣಾರ ಬೇಸೆಯ ನಿವಾಸಿ ರಮೇಶ ಜೋಗಿ ಗೊಂಡ (41) ಎಂದು ಗುರುತಿಸಲಾಗಿದೆ. ಬೈಕ್ ಹಿಂಬದಿ ಸವಾರ ನಾಗಪ್ಪ ನಾರಾಯಣ ನಾಯ್ಕ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ರೋಗಿಯೋರ್ವರನ್ನು ಕರೆದುಕೊಂಡು ಹೋಗುತ್ತಿದ್ದ  ಆ್ಯಂಬುಲೆನ್ಸ್ ಹಾಗೂ ಬೆಣಂದೂರು ರಸ್ತೆಯಿಂದ ಸರ್ಪನಕಟೆಯ ಕಡೆಗೆ ಬರುತ್ತಿದ್ದ ಬೈಕ್ ಸವಾರನ ನಡುವೆ ಅಪಘಾತ ನಡೆದಿದೆ ಎನ್ನಲಾಗಿದೆ.  

ಆ್ಯಂಬುಲೆನ್ಸ್ ನಲ್ಲಿದ್ದ ರೋಗಿಯನ್ನು ನಂತರ ಬೇರೊಂದು  ಆ್ಯಂಬುಲೆನ್ಸ್ ನಲ್ಲಿ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News