ಮಂಗಳೂರು: ಸಿಎಫ್‌ಐ ಭಿತ್ತಿಪತ್ರ ಪ್ರದರ್ಶನ
Update: 2021-12-13 23:59 IST
ಮಂಗಳೂರು, ಡಿ.13: ವಿದ್ಯಾರ್ಥಿ ನಾಯಕ ರವೂಫ್ ಶರೀಫ್‌ರನ್ನು ಕಳೆದೊಂದು ವರ್ಷದಿಂದ ಅಕ್ರಮವಾಗಿ ಬಂಧಿಸಿರಿವುದನ್ನು ಖಂಡಿಸಿ ಸಿಎಫ್‌ಐ ಮಂಗಳೂರು ನಗರ ಸಮಿಯಿಯ ಕರೆಯಂತೆ ಸೋಮವಾರ ವಿವಿಧ ಕಡೆಗಳಲ್ಲಿ ಭಿತ್ತಿ ಪತ್ರ ಪ್ರದರ್ಶನ ಮಾಡಲಾಯಿತು.
ಸಿಎಫ್‌ಐ ಮಂಗಳೂರು ವಿವಿ ಕಾಲೇಜು ಘಟಕದ ವತಿಯಿಂದ ಹಾಗೂ ಮಲಾರ್ ಏರಿಯಾ ವತಿಯಿಂದ ನಡೆದ ಸಿಎಫ್‌ಐ ಮಂಗಳೂರು ನಗರ ಜೊತೆ ಕಾರ್ಯದರ್ಶಿ ಶಾಹಿಕ್, ಜಿಲ್ಲಾ ಸಮಿತಿ ಸದಸ್ಯ ಝಮ್‌ಶೀರ್, ಜಾಬಿರ್, ಸಿದ್ಧೀಕ್ ಮತ್ತು ರಿಫಾಝ್ ಉಪಸ್ಥಿತರಿದ್ದರು.