×
Ad

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: 17 ವಾರ್ಡ್ ಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2021-12-14 17:03 IST

ವಿಟ್ಲ: ಡಿ. 27 ರಂದು ನಡೆಯಲಿರುವ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 18 ವಾರ್ಡ್ ಗಳ ಪೈಕಿ 17 ವಾರ್ಡ್ ಗಳಿಗೆ ಆಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ.

ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ  ಮಾತನಾಡಿ 11 ವಾರ್ಡ್ ಗೆ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದ್ದು ನಾಳೆ ಅಂತಿಮಗೊಳಿಸಲಿದ್ದೇವೆ. ಮುಂದಿನ ದಿನಗಳಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಕಾಂಗ್ರೆಸ್ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಈ ಸಂದರ್ಭ ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ.ವಿ,  ಜಿಲ್ಲಾ ಕಾಂಗ್ರೆಸ್ ಕೋಶಾಧಿಕಾರಿ ಶಶಿಧರ ಹೆಗ್ಡೆ,  ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಕಾಂಗ್ರೆಸ್ ವೀಕ್ಷಕರುಗಳಾದ ಮಹಮ್ಮದ್ ಕುಂಜತ್ತಬೈಲು, ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು,  ಎಂ.ಎಸ್ ಮಹಮ್ಮದ್, ಚಂದ್ರಹಾಸ ಕರ್ಕೆರ,  ಪಕ್ಷ ಪ್ರಮುಖರಾದ ರಮಾನಾಥ ವಿಟ್ಲ, ಅಬ್ದುಲ್ ಕರೀಂ ಕುದ್ದುಪದವು ವಿ.ಎ.ರಶೀದ್ ವಿಟ್ಲ, ಬಿ.ಅಬ್ದುಲ್ ಖಾದ್ರಿ  ಬೊಬ್ಬೆಕೇರಿ ಹಾಗೂ ಇಕ್ಬಾಲ್ ಹೋನೆಸ್ಟ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳವಾರ ಅಪರಾಹ್ನ 3-00 ಗಂಟೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಳ್ಳಲಿದೆ. ಬಿಜೆಪಿ ಪಕ್ಷವು 18 ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆಯಷ್ಟೇ ಬಿಡುಗಡೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News