ತುಳು ಚಾವಡಿ ತಮ್ಮನ ಹಾಗೂ ತುಳುವ ಐಸಿರ ಪ್ರಶಸ್ತಿಗೆ ಆಯ್ಕೆ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಚಾವಡಿ ತಮ್ಮನ ಪ್ರಶಸ್ತಿ, ತುಳುವ ಐಸಿರ ಪ್ರಶಸ್ತಿ ಹಾಗೂ ದತ್ತಿ ಪುರಸ್ಕಾರಕ್ಕೆ ವಿವಿಧ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಚಾವಡಿ ತಮ್ಮನ ಪ್ರಶಸ್ತಿಗೆ ಉದಯ ಧರ್ಮಸ್ಥಳ, ಮಾಧ್ಯಮ ಪ್ರಶಸ್ತಿಗೆ ಜಯಪ್ರಕಾಶ್ ಶೆಟ್ಟಿ, ಯುವ ಸಂಘಟನಾ ಪ್ರಶಸ್ತಿಗೆ ವಿಶ್ವನಾಥ್ ಶೆಟ್ಟಿ ಪಳ್ಳಿ, ಬಾಲ ಪ್ರಶಸ್ತಿಗೆ ಅದಿತಿ, ವಿಶೇಷ ಸಂಘಟನಾ ಪ್ರಶಸ್ತಿಗೆ ತುಳುವೆರೆಂಕುಲು ಬೆಂಗಳೂರು ಹಾಗೂ ದಿ.ಪ್ರಭಾಕರ ರೈಯ ದತ್ತಿ ಪುರಸ್ಕಾರವನ್ನು ಮಾಧವ ಕುಲಾಲ್ ಅವರಿಗೆ ನೀಡಿ ಗೌರವಿಸಲಾಗುವುದು.
ತುಳು ಭಾಷೆ ಹಾಗೂ ಕೋವಿಡ್ ಸಂಕಷ್ಟದಲ್ಲಿ ವಿಶೇಷವಾಗಿ ಸಹಕಾರ ನೀಡಿದ ಎಂ.ಆರ್.ಜಿ. ಗ್ರೂಪ್‌ನ ಕೆ. ಪ್ರಶಾಶ್ ಶೆಟ್ಟಿ, ಸೆಂಚುರಿ ಬಿಲ್ಟರ್ಸ್‌ನ ದಯಾನಂದ ಪೈ, ಬಜಪೆಯ ದಿವ್ಯರೂಪ ಕನ್ಸ್‌ಟ್ರಕ್ಷನ್‌ನ ಯಾದವ ಕೋಟ್ಯಾನ್ ಪೆರ್ಮುದೆ, ವಿದೇಶದಲ್ಲಿ ತುಳು ಸಂಘಟನೆಗಾಗಿ ಸರ್ವೋತ್ತಮ ಶೆಟ್ಟಿ ದುಬೈ, ಮಂಗಳೂರಿನ ಎಂ. ಸುಧೀರ್ ಪೈ, ತುಳು ಲಿಪಿಗೆ ವಿಶೇಷ ಸಹಕಾರ ನೀಡಿದ ಕಡಂದಲೆ ಸುರೇಶ್ ಭಂಡಾರಿ ಅವರನ್ನು ತುಳು ಐಸಿರ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಡಿ.18ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ತಿಳಿಸಿದ್ದಾರೆ.