ಡಿ.16: ಇನ್ನಂಜೆ ಗೋಳಿಕಟ್ಟೆಯಲ್ಲಿ ವೈಜ್ಞಾನಿಕ ಮಲ್ಲಿಗೆ ಬೇಸಾಯ ಮಾಹಿತಿ
Update: 2021-12-14 23:52 IST
ಉಡುಪಿ, ಡಿ.14: ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ವೈಜ್ಞಾನಿಕ ಮಲ್ಲಿಗೆ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮ ಡಿ.16ರ ಗುರುವಾರ ಬೆಳಗ್ಗೆ 11:00 ಗಂಟೆಗೆ ಇನ್ನಂಜೆ ಗೋಳಿಕಟ್ಟೆ ಶ್ರೀವಿಠೋಬಾ ಭಜನಾ ಮಂದಿರದ ವಠಾದಲ್ಲಿ ನಡೆಯಲಿದೆ.
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷೆ ವಿಶಾಲಾಕ್ಷಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಭಜನಾ ಮಂದಿರದ ಅಧ್ಯಕ್ಷ ಭೋಜ ಕುಲಾಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇನ್ನಂಜೆ ಗ್ರಾಪಂನ ಮಾಜಿ ಉಪಾಧ್ಯಕ್ಷೆ ಮಾಲಿನಿ ಶೆಟ್ಟಿ, ಶ್ರೀ ಧ. ಗ್ರಾ. ಯೋ. ಸೇವಾ ಪ್ರತಿನಿಧಿ ಸುಜಾತ ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹಾಗೂ ವೇಣುಗೋಪಾಲ ಎಂ. ಪಡುಕಳತ್ತೂರು ಭಾಗವಹಿಸಲಿದ್ದಾರೆ. ಕೃಷಿ ಆಸಕ್ತರು ಇದರಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಯೋಜಕ ಶ್ರೀಕರ ರಾವ್ ಇನ್ನಂಜೆ ತಿಳಿಸಿದ್ದಾರೆ.