ಮಾದಕ ದ್ರವ್ಯ ಸೇವನೆ ಆರೋಪ: ಯುವಕ ಸೆರೆ
Update: 2021-12-14 23:53 IST
ಮಂಗಳೂರು, ಡಿ.14: ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದಲ್ಲಿ ಶಂಶುದ್ದೀನ್ (30) ಎಂಬಾತನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ಉಪನಿರೀಕ್ಷಕ ಕೃಷ್ಣ ಬಿ. ಸಿಬ್ಬಂದಿಯೊಂದಿಗೆ ಡಿ.13ರಂದು ಸಂಜೆ 6 ಗಂಟೆಗೆ ಗಸ್ತು ಕರ್ತವ್ಯದಲ್ಲಿದ್ದಾಗ ಕಣ್ಣೂರು ಬಸ್ ನಿಲ್ದಾಣದ ಬಳಿ ಸಿಗರೇಟು ಸೇದುತ್ತಿದ್ದ ಶಂಶುದ್ದೀನ್‌ನ್ನು ಕರೆದು ವಿಚಾರಿಸಿದಾಗ ಆತ ತೊದಲುತ್ತಿದ್ದ. ತಕ್ಷಣ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ನಿಷೇಧಿತ ಅಮಲು ಪದಾರ್ಥ ಎಂಡಿಎಂ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ವೈದ್ಯಕೀಯ ತಪಾಸಣೆ ನಡೆಸಿದಾಗ ಎಂಡಿಎಂ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.