×
Ad

ಪುತ್ತೂರು: 20 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣ; ಆರೋಪ ಸಾಬೀತು

Update: 2021-12-14 23:58 IST

ಪುತ್ತೂರು: 20 ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ 5ನೇ ಹೆಚ್ಚುವರಿ ಸಶೆನ್ಸ್ ನ್ಯಾಯಾಲಯ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿದೆ. ಶಿಕ್ಷೆಯ ಪ್ರಮಾಣವನ್ನು ದ.15 ಕ್ಕೆ ನಿಗದಿಪಡಿಸಿದೆ.

ಉಪ್ಪಿನಂಗಡಿ ಯಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಪುತ್ತೂರಿನ ಸೂತ್ರಬೆಟ್ಟು ವಿಶ್ವನಾಥ ರೈ ಎಂಬವರನ್ನು ಆತನ ಸ್ನೇಹಿತನಾಗಿದ್ದ ಪುತ್ತೂರು ತಾಲೂಕಿನ ಕೋಡಿಂಬಾಡಿ ನಿವಾಸಿ ವಿಶ್ವನಾಥ ಶೆಟ್ಟಿ ಎಂಬಾತ ಕೊಲೆ ನಡೆಸಿದ ಆರೋಪ ಎದುರಿಸುತ್ತಿದ್ದ. 2001ಜೂನ್ 7ರಂದು ರಾತ್ರಿ ವಿಶ್ವನಾಥ ರೈ ಅವರನ್ನು ತಲೆಗೆ ರಾಡ್ ನಿಂದ ಹೊಡೆದು ಕೊಲೆ ನಡೆಸಲಾಗಿತ್ತು. ಬಳಿಕ ಕೊಲೆ ಮಾಡಿದ್ದ ಆರೋಪಿ ವಿಶ್ವನಾಥ ಶೆಟ್ಟಿ ತಲೆ ಮರೆಸಿಕೊಂಡಿದ್ದ. 13 ವರ್ಷಗಳ ನಂತರ ಆರೋಪಿಯನ್ನು ಪೊಲೀಸರು ತಮಿಳುನಾಡಿನಲ್ಲಿ ಪತ್ತೆ ಹಚ್ಚಿ ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದರು. ಹಾಗೂ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ಇದೀಗ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಲಯ ಆರೋಪಿಯ ಬಗೆಗಿನ ಆರೋಪವನ್ನು ಸಾಬೀತು ಪಡಿಸಿದೆ . ಶಿಕ್ಷೆಯ ಪ್ರಮಾಣವನ್ನು ದ.16ಕ್ಕೆ ಕಾದಿರಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News