×
Ad

ನನ್ನ ಹಾಗೂ ರೋಹಿತ್ ನಡುವೆ ಭಿನ್ನಾಭಿಪ್ರಾಯವಿಲ್ಲ: ವಿರಾಟ್ ಕೊಹ್ಲಿ ಸ್ಪಷ್ಟನೆ

Update: 2021-12-15 13:52 IST

ಹೊಸದಿಲ್ಲಿ: ನನ್ನ ಹಾಗೂ   ಟೀಂ ಇಂಡಿಯಾದ ಹೊಸದಾಗಿ ನೇಮಕಗೊಂಡಿರುವ ಸೀಮಿತ ಓವರ್ ಕ್ರಿಕೆಟ್  ನಾಯಕ ರೋಹಿತ್ ಶರ್ಮಾ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಬುಧವಾರ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ  ಸ್ಪಷ್ಟಪಡಿಸಿದ್ದಾರೆ.

ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಟೀಮ್ ಇಂಡಿಯಾವು ನಿರ್ಗಮಿಸುವ ಮೊದಲು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೊಹ್ಲಿ, ನಾಯಕನಾಗಿ ರೋಹಿತ್ ಅವರ ಸಾಮರ್ಥ್ಯಗಳನ್ನು ಶ್ಲಾಘಿಸಿದರು. ಹೊಸ ನಾಯಕ ಹಾಗೂ  ಮುಖ್ಯ ಕೋಚ್ ರಾಹುಲ್‌  ದ್ರಾವಿಡ್ ಗೆ ತಾನು ನೂರು ಪ್ರತಿಶತ ಬೆಂಬಲವನ್ನು ನೀಡುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News