×
Ad

ಪಡುಬಿದ್ರೆ: ಬ್ಯಾಡ್ಮಿಂಟನ್ ಪಂದ್ಯಾಕೂಟ ಸ್ಮ್ಯಾಷರ್ಸ್‌ ಟ್ರೋಫಿ

Update: 2021-12-15 16:25 IST

ಪಡುಬಿದ್ರೆ, ಡಿ.15: ಸ್ಮ್ಯಾಷರ್ಸ್‌ ವೆಲ್ಫೇರ್ ಹಾಗೂ ಸ್ಪೋಟ್ಸ್ ಕ್ಲಬ್ ಬೇಂಗ್ರೆ ಪಡುಬಿದ್ರೆ ಇದರ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಬಡ ಕುಟುಂಬದ ವೈದ್ಯಕೀಯ ಸಹಾಯಾರ್ಥವಾಗಿ ಸ್ಮ್ಯಾಷರ್ಸ್‌ ಗ್ರೌಂಡ್‌ನಲ್ಲಿ ನಡೆದ ರಾಜ್ಯ ಮಟ್ಟದ ಹೊರಾಂಗಣ ಬ್ಯಾಡ್ಮಿಂಟನ್ ಪಂದ್ಯಾಕೂಟ ಸ್ಮ್ಯಾಷರ್ಸ್‌ ಟ್ರೋಫಿ ರವಿವಾರ ನಡೆಯಿತು.

ಬ್ಯಾಡ್ಮಿಂಟನ್ ಪಂದ್ಯದ ವಿವಿಧ ವಿಭಾಗದಲ್ಲಿ ಒಟ್ಟು 84 ತಂಡಗಳು ಭಾಗವಹಿಸಿದವು. 20 ವರ್ಷದೊಳಗಿನ ವಿಭಾಗದಲ್ಲಿ ಪ್ರಥಮ: ರಂಜಿತ್ ಮತ್ತು ಆದಿತ್ಯ, ದ್ವಿತೀಯ: ಶಾಶ್ವತ್ ಮತ್ತು ಭರತ್, ಪಂದ್ಯಾಕೂಟದ ಉತ್ತಮ ಆಟಗಾರರಾಗಿ ರಂಜಿತ್,

35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ- ಮುನೀರ್ ಮತ್ತು ಭಾಸ್ಕರ್, ದ್ವಿತೀಯ ಅಶ್ರಫ್ ಮತ್ತು ಜಯರಾಮ್, ಉತ್ತಮ ಆಟಗಾರರಾಗಿ ಭಾಸ್ಕರ್, 50 ವರ್ಷದ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ - ಕೌಸರ್ ಮತ್ತು ಪ್ರಕಾಶ್, ದ್ವಿತೀಯ ಈಶ್ವರ್ ಮತ್ತು ಪ್ರಶಾಂತ್. ಉತ್ತಮ ಆಟಗಾರರಾಗಿ ಪರಕಾರ್ಶ, ಮುಕ್ತ ವಿಭಾಗದಲ್ಲಿ ಪ್ರಥಮ ಪವನ್ ಮತ್ತು ಯಜ್ನೇಶ್, ದ್ವಿತೀಯ-ಶಾಶ್ವತ್ ಮತ್ತು ಭರತ್, ಉತ್ತಮ ಆಟಗಾರರಾಗಿ ಯಜ್ನೇಶ್ ಆಯ್ಕೆಯಾದರು. 

ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗದ ಸಮಿತಿಯ ಅಧ್ಯಕ್ಷ ದೀಪಕ್ ಎರ್ಮಾಳು, ಗ್ರಾಪಂ ಸದಸ್ಯರಾದ ಜ್ಯೋತಿ ಮೆನನ್, ಗಣೇಶ್ ಕೋಟ್ಯಾನ್, ಕ್ಲಬ್ ಅಧ್ಯಕ್ಷ ರಮೀಝ್ ಹುಸೈನ್, ಉಪಾಧ್ಯಕ್ಷ ರಿಯಾಝ್, ಉದ್ಯಮಿಗಳಾದ ಉದ್ಯಮಿ ಹಾಜಿ ಪಿ.ಎ.ಅಬ್ದುಲ್ ರಹ್ಮಾನ್, ಪಿ.ಎ.ಹುಸೈನ್, ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಸನ್ ಅಧ್ಯಕ್ಷ ಸಿರಾಜುದ್ದೀನ್ ಎರ್ಮಾಳು, ಸಂಸ್ಥೆಯ ಗೌರವಾಧ್ಯಕ್ಷ ಕೌಸರ್, ಸಲಹೆಗಾರ ಮತ್ತಲಿಬ್, ಅಬೂಬಕರ್ ಕಾರ್ನಾಡು ಉಪಸ್ಥಿತರಿದ್ದರು.

ಉದ್ಘಾಟನೆ: ಸ್ಮ್ಯಾಷರ್ಸ್‌ ವೆಲ್ಫೇರ್ ಹಾಗೂ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ರಮೀರ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪಡುಬಿದ್ರೆ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಜಿಪಂ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರೆ, ಪಡುಬಿದ್ರೆ ಸಿಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸಂತೋಷ್ ಶೆಟ್ಟಿ ಪಲ್ಲವಿ, ಶಂಸುದ್ದೀನ್ ಕೆ.ಎಚ್., ಉಡುಪಿ ಟೆನಿಸ್ ಬಾಲ್ ಕ್ರಿಕೆಟ್ ಗೌರವಾಧ್ಯಕ್ಷ ಶರತ್ ಶೆಟ್ಟಿ, ಪಡುಬಿದ್ರೆ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ, ಅಂಬೇಡ್ಕರ್ ಯುವ ಸೇನೆ ಕಾಪು ತಾಲೂಕು ಗೌರವಾಧ್ಯಕ್ಷ ಕೃಷ್ಣ ಬಂಗೇರ, ಗ್ರಾಪಂ ಸದಸ್ಯರಾದ ನವೀನ್ ಎನ್. ಶೆಟ್ಟಿ, ಗಣೇಶ್ ಕೋಟ್ಯಾನ್, ನಿಯಾಝ್, ಕಂಚಿನಡ್ಕ ಬ್ಯಾಡ್ಮಿಂಟಬ್ ಕ್ಲಬ್ ಅಧ್ಯಕ್ಷ ಪದ್ಮನಾಭ, ಎ.ಕೆ. ಸೈಯದ್ ಆಲಿ, ಹಾಜಿ ಪಿ. ಹುಸೈನ್,  ಕ್ಲಬ್‌ನ ಗೌರವಾಧ್ಯಕ್ಷ ಮುಹಮ್ಮದ್ ಕೌಸರ್ ಉಪಸ್ಥಿತರಿದ್ದರು.

ಪಡುಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಕಿಣಿ, ಸಮಾಜ ಸೇವಲ ಆಸೀಫ್ ಆಪತ್ಬಾಂಧವ, ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಆಟಗಾರ್ತಿ ಶ್ರಾವ್ಯಾ ಗುರುರಾಜ್ ಪೂಜಾರಿ, ಪಡುಬಿದ್ರೆ ಗ್ರಾಪಂ ಸದಸ್ಯ ಶಾಫಿ ಎಂ.ಎಸ್., ಸಮಾಜ ಸೇವಕ ಎಂ.ಎಸ್. ನಿಝಾಮುದ್ದೀನ್ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News