×
Ad

ಜಿಲ್ಲಾ ಪೌರ ರಕ್ಷಣಾ ಪಡೆಗೆ ಅರ್ಜಿ ಆಹ್ವಾನ

Update: 2021-12-15 20:28 IST

ಮಂಗಳೂರು, ಡಿ.15: ಜಿಲ್ಲೆಯಲ್ಲಿ ಹೊಸದಾಗಿ ಆರಂಭಗೊಂಡಿರುವ ಪೌರ ರಕ್ಷಣಾ ಪಡೆಗೆ ಸೇರಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು 20 ವರ್ಷ ಪ್ರಾಯ ಮೇಲ್ಪಟ್ಟಿರಬೇಕು. ಜಿಲ್ಲೆಯ ಖಾಯಂ ನಿವಾಸಿಗಳಾಗಿದ್ದು, ಯಾವುದೇ ಕ್ರಿಮಿನಲ್ ಮೊಕದ್ದಮೆ ಇರಬಾರದು. ಅರ್ಜಿಯ ಜೊತೆಗೆ ವಿದ್ಯಾರ್ಹತೆ, ವಯಸ್ಸಿನ ದಾಖಲೆ, ದೈಹಿಕ ಅರ್ಹತಾ ಪ್ರಮಾಣ ಪತ್ರ, ಫೋಟೋ ಮತ್ತು ವಾಸಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳ ನಕಲು ಪ್ರತಿ ಲಗತ್ತಿಸಬೇಕು. ಯಾವುದೇ ಸಂಭಾವನೆ ಅಪೇಕ್ಷೆ ಇಲ್ಲದ, ಸಾಮಾಜಿಕ ಸೇವೆ ಮಾಡಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಹಾಗೂ ಯುವ ಜನರು ಅರ್ಜಿ ಸಲ್ಲಿಸಬಹುದು.

ಪೌರರಕ್ಷಣಾ ಪಡೆಗೆ ನೋಂದಾಯಿತರಾದ ಸದಸ್ಯರನ್ನು ನೈಸರ್ಗಿಕ ವಿಕೋಪಗಳಾದ ನೆರೆಹಾವಳಿ, ಭೂಕಂಪ, ಸುನಾಮಿ, ಚಂಡಮಾರುತ, ಭೂಕುಸಿತ, ಕಟ್ಟಡ ಕುಸಿತ, ಅನಿಲ ದುರಂತ, ಜನರ ಆಸ್ತಿಪಾಸ್ತಿ, ಪ್ರಾಣರಕ್ಷಣೆ ಹಾಗೂ ಸಮಾಜದ ರಕ್ಷಣಾ ಕಾರ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳಲಾಗುವುದು.

ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಗೃಹರಕ್ಷಕ ದಳ ಕಚೇರಿ, ಮೇರಿಹಿಲ್, ಮಂಗಳೂರು, (ದೂಸಂ: 0824-2220562) ಇಲ್ಲಿಂದ ಬೆಳಗ್ಗೆ 10ರಿಂದ ಸಂಜೆ 5:30ರೊಳಗೆ ಅರ್ಜಿ ಪಡೆಯಬಹುದು ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News