×
Ad

ಮಂಗಳೂರು; ವಿದ್ಯಾರ್ಥಿನಿಗೆ ಕಿರುಕುಳ: ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2021-12-15 21:11 IST

ಮಂಗಳೂರು, ಡಿ.15: ನಗರ ಹೊರವಲಯದ ವಾಮಂಜೂರು ಸಮೀಪದ ತಿರುವೈಲು ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ನಾಲ್ಕು ಮಂದಿಯ ವಿರುದ್ಧ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಸಹಿತ ವಿವಿಧ ಕಲಂನಡಿ ಪ್ರಕರಣ ದಾಖಲಾಗಿದೆ.

ನಗರದ ಕಾಲೇಜೊಂದರ ದ್ವಿತೀಯ ಪಿಯು ವಿದ್ಯಾರ್ಥಿನಿಗೆ ಪರಿಚಯದ ಮೂಡುಶೆಡ್ಡೆ-ವಾಮಂಜೂರು ನಿವಾಸಿ ಚರಣ್ ಮತ್ತತಾನ ಮೂವರು ಸ್ನೇಹಿತರು ಡಿ.2ರಿಂದ 9ರವರೆಗೆ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ.

ವಿದ್ಯಾರ್ಥಿನಿಯ ಮೊಬೈಲನ್ನು ಕಿತ್ತುಕೊಂಡು ಅದರಲ್ಲಿರುವ ಮೆಮೊರಿ ಕಾರ್ಡ್ ಪಡೆದುಕೊಂಡಿದ್ದಲ್ಲದೆ ಆಗಾಗ ಮೆಸೇಜ್ ಮತ್ತು ವಾಯ್ಸ್ ಕರೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆಪಾದಿಸಲಾಗಿದೆ. ಅಲ್ಲದೆ ಯಾರಿಗೂ ತಿಳಿಸಬಾರದು ಎಂದು ಬೆದರಿಸಿದ್ದಾರೆ ಎಂದು ವಿದ್ಯಾರ್ಥಿನಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News