×
Ad

ಡಿ.16: ರೌಡಿ ಶೀಟರ್ ಪಟ್ಟಿಯಿಂದ ಮುಕ್ತಿ ಕಾರ್ಯಕ್ರಮ

Update: 2021-12-15 21:13 IST

ಮಂಗಳೂರು, ಡಿ.15: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 100ಕ್ಕೂ ಅಧಿಕ ಹಳೆಯ ರೌಡಿಗಳ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗೆಯಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಈ ಹಿಂದೆ ರೌಡಿ ಶೀಟರ್‌ಗಳಾಗಿದ್ದು ಪ್ರಸ್ತುತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರದ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ರೌಡಿಶೀಟ್ ಪಟ್ಟಿಯಿಂದ ಕೈಬಿಡಲಾಗುತ್ತಿದೆ.

ರೌಡಿಶೀಟರ್‌ನಿಂದ ಮುಕ್ತವಾದವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದಕ್ಕಾಗಿ ಡಿ.16ರಂದು ಮಂಗಳೂರಿನಲ್ಲಿ ಪರಿವರ್ತನಾ ಸಭೆ ಆಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News