ಅಡ್ಯಾರ್ ಕಣ್ಣೂರಿನಲ್ಲಿ ಮಾಹಿತಿ ಕಾರ್ಯಗಾರ
ಮಂಗಳೂರು : ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್, ಅಡ್ಯಾರ್ ಕಣ್ಣೂರ್ ರೇಂಜ್ ಇದರ ಆಶ್ರಯದಲ್ಲಿ ರೇಂಜ್ ವ್ಯಾಪ್ತಿಯ ಮಸೀದಿ/ಮದರಸಗಳ ಭೂ ದಾಖಲೆಗಳಿಗೆ ಸಂಬಂಧಪಟ್ಟ ಮಾಹಿತಿ ಕಾರ್ಯಗಾರವು ಅಡ್ಯಾರ್ ಕಣ್ಣೂರ್ ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಿತು.
ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಅಬ್ದಲ್ ರಝಾಕ್(ಉಂಙಾಕ) ಅಧ್ಯಕ್ಷತೆಯಲ್ಲಿ ಕಾರ್ಯಗಾರ ಜರಗಿತು. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಕಣ್ಣೂರ್, ಕಾಸರಗೋಡು ಮತ್ತು ಮಂಗಳೂರು ವಲಯದ ನಿರೀಕ್ಷಕರಾದ(ಮುಜವ್ವಿದ್) ಅಬ್ದುಲ್ ಖಾದರ್ ಫೈಝಿ ಪಲ್ಲಂಗೋಡ್ ದುವಾಃ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
SKIMV ಬೋರ್ಡಿನ ಮುದರ್ರಿಬ್ ರಿಯಾಝ್ ಮೌಲವಿ, ಮುಫತ್ತಿಸ್ ಹನೀಫ್ ಮುಸ್ಲಿಯಾರ್ ಬೋಳಂಗಡಿ ಮತ್ತು ದ.ಕ.ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಇಬ್ರಾಹಿಮ್ ಕೊಣಾಜೆ ಆಶಂಸಾ ಭಾಷಣ ಮಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭೂ ದಾಖಲೆಗಳ ಮಾಹಿತಿ ಕಾರ್ಯಗಾರವನ್ನು ಮಂಗಳೂರಿನ ನ್ಯಾಯವಾದಿ ಇಸ್ಹಾಕ್ ಕಡಬ ಮತ್ತು ಸಾಮಾಜಿಕ ಕಾರ್ಯಕರ್ತರಾದ ಹುಸೈನ್ ಬಡಿಲ ನಡೆಸಿಕೊಟ್ಟು, ಮಸೀದಿಗೆ ಸಂಬಂಧಪಟ್ಟ ಭೂ ದಾಖಲೆಗಳನ್ನು ಯಾವ ರೀತಿ ಸಂರಕ್ಷಿಸಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಡ್ಯಾರ್ ಕಣ್ಣೂರ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಕೆ.ಎಸ್. ಹಮೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ , ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರತಿನಿಧಿಗಳಾದ ಅಬ್ದುಲ್ ರಹ್ಮಾನ್ ಹಾಜಿ ಸೀಝರ್, ಡಿ.ಎಮ್ ಮುಹಮ್ಮದ್ ಹಾಜಿ ದಯಂಬು, ಅಬ್ದಲ್ ರಹ್ಮಾನ್ ಹಾಜಿ (ನಸೀಮಾ ಬೀಡಿ) ,ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಇಬ್ರಾಹಿಮ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಹನೀಫಿ, ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಕೋಶಾಧಿಕಾರಿ ಅನ್ವರ್ ಬಜಲ್ ಪಡ್ಪು, ರೇಂಜ್ ವ್ಯಾಪ್ತಿಯ ವಿವಿಧ ಮದರಸಗಳ ಪ್ರತಿನಿಧಿಗಳು, ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.