×
Ad

ಮಹಮ್ಮದ್ ಫಯಾಝ್ ಗೆ ಪಿ.ಎಚ್.ಡಿ ಪದವಿ

Update: 2021-12-16 12:33 IST

ಮಂಗಳೂರು : ನಗರದ ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹಮ್ಮದ್ ಫಯಾಝ್ ಅವರು ಡಾ. ಬೀರಾನ್ ಮೊಯಿದ್ದೀನ್ ಬಿ.ಎಂ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ "ಎ ಸ್ಟಡಿ ಆಫ್ ಫ್ಯಾಕ್ಟರ್ಸ್ ಎಫೆಕ್ಟಿಂಗ್ ಕಸ್ಟಮರ್ ಪರ್ ಸೆಪ್ಷನ್ ಆನ್ ಬ್ರಾಂಡ್ ಸೆಲೆಕ್ಷನ್ ಆಫ್ ಫೋರ್ ವೀಲರ್ಸ್ ಇನ್ ಕೋಸ್ಟಲ್ ಕರ್ನಾಟಕ'' ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು (VTU) ಪಿ.ಎಚ್.ಡಿ (ಡಾಕ್ಟರೇಟ್) ಪದವಿ ನೀಡಿ ಗೌರವಿಸಿದೆ.

ಮಹಮ್ಮದ್ ಫಯಾಝ್ ಅವರು ಖದೀಜಾ ಡಿ. ಮತ್ತು ಇಬ್ರಾಹಿಂ ಡಿ.ಎ ಇವರ ಪುತ್ರ. ಇವರು ಮೂಲತಃ ಕರೋಪಾಡಿ ಗ್ರಾಮದ ಬಾಕಿಮಾರ್ ನಿವಾಸಿಗಳಾಗಿದ್ದು ಪ್ರಸ್ತುತ ಲೋವರ್ ಬೆಂದೂರಿನಲ್ಲಿ ನೆಲೆಸಿದ್ದಾರೆ.

ಮಹಮ್ಮದ್ ಫಯಾಝ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ, ಮಿತ್ತನಡ್ಕದಲ್ಲಿ ಮುಗಿಸಿ, ನಂತರ ವಿಠಲ ಪದವಿ ಪೂರ್ವ ಕಾಲೇಜು, ಎಸ್ ಡಿ ಎಂ ಮಂಗಳೂರು ಹಾಗೂ ಪಿ.ಎ.ಕಾಲೇಜಿನಲ್ಲಿ ತಮ್ಮ ಉನ್ನತ ಶಿಕ್ಷಣ ವನ್ನು ಪಡೆದರು.

ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News