ಮಂಗಳೂರು: ಭವಿಷ್ಯ ನಿಧಿ ಕಚೇರಿ ಮುಂದೆ ಪ್ರತಿಭಟನೆ
Update: 2021-12-16 20:51 IST
ಮಂಗಳೂರು, ಡಿ.16: ನಗರದ ಹೈಲ್ಯಾಂಡ್ ಸಮೀಪದಲ್ಲಿರುವ ಭವಿಷ್ಯ ನಿಧಿ ಕಚೇರಿಯ ಮುಂದೆ ಬೀಡಿ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.
ಬೇರೆ ಯಾವುದೇ ದಾಖಲೆ ಕೇಳದೆ ಪಿಎಫ್ ದಾಖಲೆ ಆಧಾರಕ್ಕೆ ಅನುಗುಣವಾಗಿ ತಿದ್ದುಪಡಿ, ಈ ನೋಮಿನೇಶನ್‌ಗೆ ಸಮಯವ ಕಾಶ, ಕಾರ್ಮಿಕರ ಪಿಎಫ್ ರದ್ದುಪಡಿಸಬಾರದು, ಕನ್ನಡ ಬರುವವರೇ ಕಮಿಷನರ್ ಆಗಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿ ಸುವಂತೆ ಆಗ್ರಹಿಸಿ ಪ್ರತಿಭಟಿಸಿದರು.
ಅಲ್ಲದೆ ಭವಿಷ್ಯ ನಿಧಿ ಇಲಾಖೆಯ ಆಯುಕ್ತರು ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅದರಂತೆ ಆಯುಕ್ತರು ಕಾರ್ಮಿಕರ ಬಳಿಗೆ ಬಂದು ಮನವಿ ಸ್ವೀಕರಿಸಿದರು.
ಕಾರ್ಮಿಕ ಮುಖಂಡರಾದ ಬಿ.ಎಂ.ಭಟ್, ಮಂಜುನಾಥ್, ಈಶ್ವರಿ, ನೆಬಿಸಾ, ಪುಷ್ಪಾ, ಕುಮಾರಿ, ಸುಜಾತಾ, ಭವ್ಯಾ, ಗಣೇಶ ಪ್ರಸಾದ್, ಬೀಡಿ ಗುತ್ತಿಗೆದಾರ ಸಂಘದ ನುಖಂಡರಾದ ರವಿ ಪೂಜಾರಿ, ಕೃಷ್ಣಪ್ಪ, ಲಕ್ಷ್ಮಣ, ರಾಧಾಕೃಷ್ಣ ಶೆಟ್ಟಿ, ಗಂಗಾಧರ ಶೆಟ್ಟಿ, ಜಲೀಲ್, ಸಂಜೀವ ಪೂಜಾರಿ, ಮಹಾಬಲ ನಾಯ್ಕ, ಸೈಯದ್ ಹಬೀಬ್ ಸಾಹೇಬ್ ಉಪಸ್ತಿತರಿದ್ದರು.