×
Ad

ಮಂಗಳೂರು : ಪ್ರಸಿದ್ಧ ಕಂಪನಿಗಳ ಉತ್ಪನ್ನಗಳ ರಿಯಾಯಿತಿ ಮಾರಾಟ ಮೇಳ

Update: 2021-12-16 21:13 IST

ಮಂಗಳೂರು : ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯುತ್ತಿರುವ ಗಾರ್ಮೆಂಟ್ಸ್ ಶೂಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಪ್ರಥಮ ಬಾರಿಗೆ ನೂರಕ್ಕೂ ಹೆಚ್ಚು ಪ್ರಸಿದ್ಧ ಕಂಪನಿಗಳ ಬ್ಯಾಂಡೆಡ್ ಗಾರ್ಮೆಂಟ್ಸ್ ಮತ್ತು ಶೂಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಭರದಿಂದ ಮಾರಾಟ ನಡೆಯುತ್ತಿದೆ. ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಮೇಳ ನಡೆಯುತ್ತಿದೆ. ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿಂದ ಎಲ್ಲಾ ರೀತಿಯ ಸಿದ್ಧತೆ ಹಾಗೂ ಹೆಚ್ಚುವರಿ ಸ್ಟಾಕ್‌ಗಳನ್ನು ಸಂಗ್ರಹಿಸಲಾಗಿದೆ.

ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಅಂದರೆ ಶೇ.60ರವರೆಗೆ ರಿಯಾಯಿತಿಯನ್ನು ಮಾರಾಟ ಮೇಳದಲ್ಲಿ ಘೋಷಿಸಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಕೋವಿಡ್ 19 ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್ ಇದ್ದುದರಿಂದ ಕೋಟ್ಯಂತರ ರೂ. ಬೆಲೆ ಬಾಳುವ ಗಾರ್ಮೆಂಟ್ಸ್‌ಗಳು ಹಾಗೂ ಶೂಗಳು ಗೋಡೌನ್‌ನಲ್ಲಿ ಬಾಕಿಯಾಗಿತ್ತು. ಇದನ್ನು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನೀಡಲು ಈ ಮೇಳ ಆಯೋಜಿಸಲಾಗಿದೆ.

ದೇಶ, ವಿದೇಶದ ಪ್ರಖ್ಯಾತ ಕಂಪನಿಗಳ ಉತ್ಪನ್ನಗಳು ಈ ಮೇಳದಲ್ಲಿರಲಿದ್ದು, ರಿಯಾಯಿತಿ ದರದಲ್ಲಿ ಖರೀದಿಸಲು ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಲಿದೆ.

ಗ್ರಾಹಕರು ಖರೀದಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸಹಿತಎಲ್ಲಾ ಡಿಜಿಟಲ್ ಪಾವತಿ ಸೌಲಭ್ಯವನ್ನು ಬಳಸಿಕೊಳ್ಳಬಹುದು.
*ರಿಟೇಲ್‌ನಲ್ಲಿ 1500 ರೂ. ಗಾರ್ಮೆಂಟ್ಸ್‌ಗಳು ಬ್ರಾಂಡ್‌ಡ್ ಪ್ಯಾಂಟ್ಸ್ ಶರ್ಟ್, ಟಿ-ಶರ್ಟ್, ಲೋವರ್ ಟಾಪ್, ಕುರ್ತಿ, ಸಲ್ವಾರ್, ಲೆಗ್ಗಿಂಗ್ಸ್, ಬರ್ಮುಡಾ, ಪೈಜಾಮ್, ಸ್ಕರ್ಟ್ ಈ ಮೇಳದಲ್ಲಿ ಕೇವಲ 300 ರೂ. ದರದಲ್ಲಿ ಲಭಿಸಲಿದೆ. ಮೂರು ಸಾವಿರ ರೂ. ಬೆಲೆಯ ಬ್ರಾಂಡೆಡ್ ಫಾರ್ಮಲ್ ಶರ್ಟ್ ಕೇವಲ 400 ರೂ.ನಿಂದ 700 ರೂ.ಗೆ ಲಭ್ಯವಿದೆ. ಶೇ.100 ಬ್ರಾಂಡೆಡ್ ಲೆದರ್ ಶೂಗಳು ಕೇವಲ 100 ರೂ.ಯಿಂದ 1,500 ರೂ. ದರದಲ್ಲಿ ಲಭ್ಯವಿದೆ.

ಪಿಲ್ಲೋ, ಬಾತ್ ಟಿವಲ್, ಮ್ಯಾಟ್ಸ್ ಲಭ್ಯವಿದೆ. 3000ರಿಂದ 4,900 ರೂ. ಮೌಲ್ಯದ ಇಂಟರ್ ನ್ಯಾಷನಲ್ ಬ್ರಾಂಡೆಡ್‌ನ ಶರ್ಟ್ ಮತ್ತು ಜೀನ್ಸ್ 800 ರೂ.ಗೆ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News