ಡಿ.17: ಶಾರ್ಜಾದಲ್ಲಿ ಮುಈನುಸ್ಸುನ್ನ ಮದನೀಯಂ ಕಾರ್ಯಕ್ರಮ
Update: 2021-12-16 21:38 IST
ಮಂಗಳೂರು, ಡಿ.16: ಕರ್ನಾಟಕದ ಯುಎಇ ಕಾರ್ಯಕರ್ತರು ಸೇರಿ ಉತ್ತರ ಕರ್ನಾಟಕದಲ್ಲಿ ನಡೆಸುತ್ತಿರುವ 'ಮುಈನುಸ್ಸುನ್ನ ಅಕಾಡಮಿ'ಯ ಮುಈನುಸ್ಸುನ್ನ ಮದನೀಯಂ ಮಜ್ಲಿಸ್ ಹಾಗೂ ಶೈಕ್ಷಣಿಕ ಜಾಗೃತಿ ಸಮಾವೇಶವು ಡಿ.17ರಂದು ಯುಎಇ ಸಮಯ 5 ಗಂಟೆಗೆ ಶಾರ್ಜಾದ ಮುಬಾರಕ್ ಸೆಂಟರ್‌ನಲ್ಲಿ ನಡೆಯಲಿದೆ.
ಯುಎಇ ಮುಈನುಸ್ಸುನ್ನ ಸಮಿತಿ ಅಧ್ಯಕ್ಷ ಕಮಾಲುದ್ದೀನ್ ಅಂಬ್ಲಮೊಗರ್‌ರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಎಸ್‌ಇಡಿಸಿ ಅಧ್ಯಕ್ಷ ಕೆ.ಕೆ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಉದ್ಘಾಟಿಸಲಿದ್ದಾರೆ.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫಾ ನಈಮಿ ಶೈಕ್ಷಣಿಕ ಜಾಗೃತಿ ಭಾಷಣ ಮಾಡಲಿದ್ದು, ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಅಶ್ರಫ್ ಸತ್ತಿಕ್ಕಲ್ಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.