×
Ad

​ರಿಕ್ಷಾ ಢಿಕ್ಕಿ : ಗಾಯಾಳು ವೃದ್ಧ ಮೃತ್ಯು

Update: 2021-12-16 21:42 IST

ಮಂಗಳೂರು, ಡಿ.16: ಕುಲಶೇಖರ ಸಮೀಪದ ಶಕ್ತಿನಗರ ಕ್ರಾಸ್ ಬಳಿ ಕೆಲವು ದಿನಗಳ ಹಿಂದೆ ಆಟೋ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಸ್ಥಳೀಯ ನಿವಾಸಿ ಜೆರಾಲ್ಡ್ ಡಿಸಿಲ್ವಾ (73) ಬುಧವಾರ ಸಾವನ್ನಪ್ಪಿದ್ದಾರೆ.

ಡಿ.5ರಂದು ಜೆರಾಲ್ಡ್ ಡಿಸಿಲ್ವಾ ಹೊಟೇಲ್‌ಗೆಂದು ಹೊರಟು ರಾಷ್ಟ್ರೀಯ ಹೆದ್ದಾರಿ 169 ದಾಟುತ್ತಿದ್ದಾಗ ವಾಮಂಜೂರು ಕಡೆಯಿಂದ ಕುಲಶೇಖರ ಕೈಕಂಬ ಕಡೆಗೆ ವೇಗವಾಗಿ ಸಾಗುತ್ತಿದ್ದ ಆಟೊ ರಿಕ್ಷಾ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಕಾರಿಯಾಗದೆ ಡಿ.15 ರಂದು ಸಾವನ್ನಪ್ಪಿದರು.

ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News