ಕೆಮ್ಮಾರ : ಶಂಸುಲ್ ಉಲಮಾ ವಿದ್ಯಾಸಂಸ್ಥೆಯಲ್ಲಿ ಮಜ್ಲಿಸುನ್ನೂರು ಸಂಗಮ
Update: 2021-12-16 22:11 IST
ಉಪ್ಪಿನಂಗಡಿ : ಕೆಮ್ಮಾರ ಸಮೀಪದ ಶಕ್ತಿನಗರದ ಶಂಸುಲ್ ಉಲಮಾ ಮೆಮೋರಿಯಲ್ ಟ್ಟಸ್ಟ್ ಆಶ್ರಯದಲ್ಲಿರುವ ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜ್ ಮತ್ತು ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಮಜ್ಲಿಸುನ್ನೂರು ಸಂಸ್ಥಾಪನೆಯನ್ನು ಸಯ್ಯಿದ್ ಅಕ್ರಂ ಅಲಿ ತಂಙಳ್ ಅಲ್ ರಹ್ಮಾನಿಯ ನೇತೃತ್ವದಲ್ಲಿ ನೆರವೇರಿಸಲಾಯಿತು.
ಸಂಸ್ಥೆಯ ಅದ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಮುಖ್ಯಭಾಷಣ ಮಾಡಿದರು. ಕೋಶಾಧಿಕಾರಿ ಹಸೈನಾರ್ ಹಾಜಿ, ಸಂಚಾಲಕ ಅಬ್ದುರ್ರಶೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ, ಗಂಡಿಬಾಗಿಲು ಜಮಾಅತ್ ಅಧ್ಯಕ್ಷ ಆದಂ ಹಾಜಿ, ಖತೀಬ್ ಫೈಝಿ ಉಸ್ತಾದ್, ಹನೀಫ್ ದಾರಿಮಿ ನೆಕ್ಕಿಲಾಡಿ, ಕೆಎಂಎ ಕೊಡುಂಗಾಯಿ, ಬಡಿಲ ಹುಸೈನ್, ಇಸ್ಮಾಯೀಲ್ ಕೆಮ್ಮಾರ, ಇಸಾಕ್ ಎನ್.ಎ, ಆದಂ ಹಾಜಿ, ಕಲಂದರ್, ರಝಾಕ್ ದಾರಿಮಿ ತಿಂಗಲಾಡಿ, ರಝಾಕ್ ಗಂಡಿಬಾಗಿಲು, ಫಾಝಿಲ್, ಅಬ್ದುಲ್ ಖಾದಿರ್ ಅಲ್‌ಶಾಫಿ, ಫಝಲುದ್ದೀನ್ ಹೇಂತಾರ್ ಉಪಸ್ಥಿತರಿದ್ದರು.