×
Ad

ಪುತ್ತೂರು : ಡಿ.18ರಂದು ಮುಸ್ಲಿಂ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ ಫೆಡರೇಶನ್ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ

Update: 2021-12-17 11:17 IST

ಪುತ್ತೂರು, ಡಿ.17: ಮುಸ್ಲಿಂ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ ಫೆಡರೇಶನ್ (ಮೀಫ್) ದ.ಕ. ಮತ್ತು ಉಡುಪಿ ಜಿಲ್ಲೆ ಇದರ ವತಿ ಯಿಂದ ಶೈಕ್ಷಣಿಕ ಕಾರ್ಯಾಗಾರ (ಕಲಿಸುವ ವಿಧಾನ ಮತ್ತು ಪ್ರೇರಣೆ) ಹಾಗೂ 'ಮೀಫ್' ಪಶ್ಚಿಮ ವಲಯ ಸಮ್ಮೇಳನವು ಡಿ.18ರಂದು ಬೆಳಗ್ಗೆ 9:30ಕ್ಕೆ ಪುತ್ತೂರಿನ ಬಪ್ಪಳಿಗೆ ಬೈಪಾಸ್ ರಸ್ತೆಯ ಅಶ್ಮಿ ಕಂಫರ್ಟ್ಸ್‌ನಲ್ಲಿ ನಡೆಯಲಿದೆ‌.

ಕಾರ್ಯಾಗಾರವನ್ನು ಪುತ್ತೂರು ಬಿಇಒ ಸಿ.ಲೋಕೇಶ್ ಉದ್ಘಾಟಿಸಲಿದ್ದು, 'ಮೀಫ್' ಪಶ್ಚಿಮ ವಲಯ ಉಪಾಧ್ಯಕ್ಷ ಕೆ.ಎಂ. ಮುಸ್ತಫಾ ಸುಳ್ಯ, ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತರಬೇತುದಾರ ಪ್ರೊ. ರಾಜೇಂದ್ರ ಭಟ್ ಭಾಗವಹಿಸಲಿದ್ದಾರೆ‌. ಅಪರಾಹ್ನ ‌3:30ಕ್ಕೆ ನಡೆಯುವ ವಲಯ ಸಮ್ಮೇಳನವನ್ನು ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಜಿ ಕೆ.ಪಿ. ಅಹ್ಮದ್ ಆಕರ್ಷನ್ ಉದ್ಘಾಟಿಸಲಿದ್ದಾರೆ‌. ಅತಿಥಿಯಾಗಿ ಆಶ್ಕೊ ಡೈಮಂಡ್ ಪ್ರೈ.ಲಿ. ನ ಅಧ್ಯಕ್ಷ ಡಾ. ಅಶ್ರಫ್ ಎಸ್.‌ಕಮ್ಮಾಡಿ, ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹಾಜಿ ಯು. ಮುಹಮ್ಮದ್ ಭಾಗವಹಿಸಲಿದ್ದು, 'ಮೀಫ್' ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷತೆ ವಹಿಸಲಿದ್ದಾರೆ‌ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News