ಉತ್ತರಪ್ರದೇಶ ರೈತರ ಹತ್ಯೆಯ ಕುರಿತು ಸಂಸತ್ತಿನಲ್ಲಿ ಮುಂದುವರಿದ ಪ್ರತಿಭಟನೆ
Update: 2021-12-17 12:39 IST
ಹೊಸದಿಲ್ಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸತತ ಮೂರನೇ ದಿನವಾದ ಶುಕ್ರವಾರ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದು ಹಲವು ಗೊಂದಲಗಳಿಗೆ ಕಾರಣವಾಯಿತು.
ಪ್ರತಿಪಕ್ಷಗಳ ಸಂಸದರು ಉಭಯ ಸದನಗಳಲ್ಲಿ ಭಿತ್ತಿಪತ್ರಗಳನ್ನು ಹಿಡಿದಿದ್ದರು. ಹೀಗಾಗಿ ಕಲಾಪವನ್ನು ಮುಂದೂಡಲಾಯಿತು.
ಪ್ರತಿಪಕ್ಷಗಳು ಹಾಗೂ ಸರಕಾರ ಅಡೆತಡೆಗಳನ್ನು ಪರಿಹರಿಸಲು ನಿರ್ಧಾರ ತೆಗೆದುಕೊಂಡ ಬಳಿಕ ರಾಜ್ಯಸಭೆ ಕಲಾಪವು ಮುಂದೂಡಲ್ಪಟ್ಟಿತು.
ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸದನವು ಸಭೆ ಸೇರಿದ ಕೂಡಲೇ ಸದನ ಮುಂದೂಡಿಕೆಯ ಘೋಷಣೆ ಮಾಡಿದರು.
ಸದನವನ್ನು ಸೋಮವಾರಕ್ಕೆ ಮುಂದೂಡಿದ ನಾಯ್ಡು, ಪಕ್ಷಗಳು ಪರಿಹಾರವನ್ನು ಕಂಡುಕೊಳ್ಳಲು ಹಾಗೂ ಸದನದ ಕಲಾಪದಲ್ಲಿ ಶಾಂತಿ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳಲು ನಿರ್ಧರಿಸಿವೆ ಎಂದು ಅವರು ಹೇಳಿದರು.