×
Ad

​ಡಿ.19ರಂದು ಗಾನ ಮಾಧುರಿ ಸಂಗೀತ ಕಚೇರಿ

Update: 2021-12-17 19:29 IST

ಉಡುಪಿ, ಡಿ.17: ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ಬಳ್ಳಪದವಿನಲ್ಲಿರುವ ವೀಣಾವಾದಿನೀ ಸಂಗೀತ ವಿದ್ಯಾಪೀಠ ವತಿಯಿಂದ ಡಿ.19 ರಂದು ಸಂಜೆ 5ಗಂಟೆಗೆ ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಲಹೆಗಾರ ಡಾ.ವಸಂತ ಕುಮಾರ್ ಪೆರ್ಲ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಿದ್ದ ಸಂಗೀತಗಾರರಾದ ಕಲಾವಿದ ಯೋಗೀಶ್ ಶರ್ಮಾ ಬಳ್ಳಪದವು, ಪಿಟೀಲು ರಂಜಿತ್, ಮೃದಂಗಮ್‌ನಲ್ಲಿ ವೈಕಂ ಪ್ರಸಾದ್, ಘಟಮ್‌ನಲ್ಲಿ ಉಣ್ಣಿ ಕೃಷ್ಣನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿ ರುವರು. ಜನವರಿ ತಿಂಗಳಲ್ಲಿ ಕಟೀಲು ದೇವಸ್ಥಾನದಲ್ಲಿ ಸಂಗೀತ ಕಚೇರಿ ಜರಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೀಣಾವಾದಿನಿ ಸಂಗೀತ ಸಭಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News