×
Ad

ಉಡುಪಿ ನಗರಸಭೆಯಲ್ಲಿ ಗುಡ್ ಗವರ್ನೆನ್ಸ್ ವೀಕ್; ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥ

Update: 2021-12-17 20:10 IST

ಉಡುಪಿ, ಡಿ.17: ರಾಜ್ಯ ಸರಕಾರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ನಿರ್ದೇಶನದಂತೆ ಡಿ.20ರಿಂದ ಡಿ. 24ರವರೆಗೆ ಒಂದು ವಾರದ ಅವಧಿಯನ್ನು ಗುಡ್ ಗವರ್ನೆನ್ಸ್ ವೀಕ್ ಎಂದು ಪರಿಗಣಿಸಲಾಗಿದ್ದು, ಈ ಅವಧಿಯಲ್ಲಿ ಉಡುಪಿ ನಗರಸಭೆಗೆ ಸಂಬಂಧಿಸಿದ ಸೇವೆಗಳಾದ ಆಸ್ತಿ ಮಾಲೀಕತ್ವ ವರ್ಗಾವಣೆ, ಇ-ಸ್ವತ್ತು, ಜನನ ಮರಣ ಪತ್ರ, ಮಾಹಿತಿ ಹಕ್ಕು (ಆರ್‌ಟಿಐ) ಹಾಗೂ ವ್ಯಾಪಾರ ಪರವಾನಗಿ ಪತ್ರ ಕುರಿತ ಸಾರ್ವಜನಿಕ ಕುಂದುಕೊರತೆಗಳ ಮವಿಯನ್ನು ಇತ್ಯರ್ಥಪಡಿಸುವ ವಿಶೇಷ ಕಾರ್ಯಕ್ರಮವನ್ನು ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಸಾರ್ವಜನಿಕರು ಮೇಲ್ಕಂಡ ಸೇವೆಗಳಿಗೆ ಈಗಾಗಲೇ ನಗರಸಭಾ ಕಚೇರಿ ಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ, ತಮ್ಮ ಸ್ವತ್ತಿನ ಸೂಕ್ತ ದಾಖಲಾತಿಗಳ ಪರಿಶೀಲನೆ ಯೊಂದಿಗೆ ಸೇವೆಯನ್ನು ಸ್ಥಳದಲ್ಲಿಯೇ ವಾರ್ಡ್‌ವಾರು ನಿಗದಿಗೊಳಿಸಿದ ದಿನಾಂಕದಂದು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿ ಸೇವೆಯನ್ನು ಪಡೆಯ ಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News