×
Ad

ಡಿ.18ರಂದು ವಿಮಾ ನೌಕರರ ಸಂಘದ 63ನೇ ವಿಭಾಗೀಯ ಸಮ್ಮೇಳನ

Update: 2021-12-17 21:28 IST

ಉಡುಪಿ, ಡಿ.17: ಉಡುಪಿ ವಿಭಾಗ ವಿಮಾ ನೌಕರರ ಸಂಘದ 63ನೇ ವಿಭಾಗೀಯ ಸಮ್ಮೇಳನವು ಡಿ.18ರ ಶನಿವಾರ ಉಡುಪಿ ಎಲ್‌ಐಸಿ ಎಂಪ್ಲಾಯಿಸ್ ಕೊ-ಆಪರೇಟಿವ್ ಬ್ಯಾಂಕ್ ಲಿ.ನ ವಜ್ರಮಹೋತ್ಸವ ಕಟ್ಟಡದಲ್ಲಿ ನಡೆಯಲಿದೆ.

ಕಾರ್ಯಕ್ರಮ ನಾಳೆ ಬೆಳಗ್ಗೆ 9:30ಕೆ ಪ್ರಾರಂಭಗೊಳ್ಳಲಿದೆ. ಸಮ್ಮೇಳನದ ಉದ್ಘಾಟನೆಯನ್ನು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟ ಹೈದರಾಬಾದ್ ಇದರ ಜೊತೆ ಕಾರ್ಯದರ್ಶಿ ಜೆ.ಸುರೇಶ್ ನೆರವೇರಿಸಲಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜೀವವಿಮಾ ಕಛೇರಿಗಳಿಂದ ಸಂಘದ ಸದಸ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಉಡುಪಿ ವಿಭಾಗ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News