ಡಿ.19: 'ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್'- ಸಾಂಸ್ಕೃತಿಕ ತೇರು ಕಾರ್ಯಕ್ರಮ
ಮಂಗಳೂರು, ಡಿ.17: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಡಿ,19ರಂದು ಉಳ್ಳಾಲದ ಹತ್ತು ಸ್ಥಳಗಳಲ್ಲಿ ಬ್ಯಾರಿ ಜನಪದ, ಕಲೆ, ಸಂಸ್ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬ್ಯಾರಿ ಸಾಂಸ್ಕೃತಿಕ ರಥದ ಮೂಲಕ 'ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9ಗಂಟೆಗೆ ಬ್ಯಾರಿ ಅಕಾಡಮಿಯ ಮಂಗಳೂರು ಕಚೇರಿ ಬಳಿ ನಡೆಯಲಿದ್ದು, ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಹಾಗೂ ಅಕಾಡಮಿಯ ಮಾಜಿ ಸದಸ್ಯ ಹಸನಬ್ಬ ಮೂಡಬಿದಿರೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಳ್ಳಾಲ ತಾಲೂಕಿನ ಕೋಟೆಪುರ, ಕೋಡಿ, ನಗರಸಭೆಯ ಮುಂಭಾಗ, ಮುಕ್ಕಚೇರಿ, ಮಾಸ್ತಿಕಟ್ಟೆ, ಮೇಲಂಗಡಿ, ಹಳೆಕೋಟೆ, ಅಳೇಕಲ, ಅಂಬೇಡ್ಕರ್ ಮೈದಾನ (ಒಳಪೇಟೆ ತೊಕ್ಕೊಟ್ಟು)ದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಬ್ಯಾರಿ ಸಾಂಸ್ಕೃತಿಕ ರಥದ ಮೂಲಕ ಬ್ಯಾರಿ ಸಂಗೀತ ಕಾರ್ಯಕ್ರಮ, ಬ್ಯಾರಿ ಜಾನಪದ ನೃತ್ಯಗಳಾದ ಕೋಲ್ಕಲಿ, ಒಪ್ಪನೆ ಪಾಟ್, ಬ್ಯಾರಿ ದಫ್ ನೃತ್ಯ ಪ್ರದರ್ಶನಗಳು ನಡೆಯಲಿದೆ ಎಂದು ರಿಜಿಸ್ಟ್ರಾರ್ ಪೂರ್ಣಿಮ ತಿಳಿಸಿದ್ದಾರೆ.