‘‘ತಮಿಳ್ ತಾಯ್ ವಾಝ್ತು’’ವನ್ನು ನಾಡಗೀತೆಯಾಗಿ ಘೋಷಿಸಿದ ತಮಿಳುನಾಡು ಸರಕಾರ

Update: 2021-12-17 17:38 GMT
Photo : PTI

ಚೆನ್ನೈ, ಡಿ. 17: ‘‘ತಮಿಳ್ ತಾಯ್ ವಝ್ತು’’ವನ್ನು ನಾಡಗೀತೆಯಾಗಿ ತಮಿಳುನಾಡು ಸರಕಾರ ಶುಕ್ರವಾರ ಘೋಷಿಸಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರಿ ಕಚೇರಿಗಳ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಹಾಡು ಹಾಡಬೇಕು ಎಂದು ಸರಕಾರ ಸೂಚಿಸಿದೆ. ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ ಹಾಗೂ ಸರಕಾರಿ ಕಚೇರಿಗಳ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳ ಆರಂಭವನ್ನು ಈ ನಾಡಗೀತೆ ಹಾಡುವುದರೊಂದಿಗೆ ಆರಂಭಿಸಬೇಕು ಎಂದು ರಾಜ್ಯ ಸರಕಾರದ ಆದೇಶ ಸೂಚಿಸಿದೆ. ‌

ಈ ನಾಡಗೀತೆಯನ್ನು ಹಾಡುವ ಸಂದರ್ಭ ಭಿನ್ನ ಸಾಮರ್ಥ್ಯರನ್ನು ಹೊರತುಪಡಿಸಿ ಉಳಿದವರೆಲ್ಲರೂ ಎದ್ದು ನಿಲ್ಲಬೇಕು ಎಂದು ತಮಿಳುನಾಡು ಸರಕಾರ ಹೇಳಿದೆ. ಸರಕಾರ ಈ ಕುರಿತು ಆದೇಶ ಹೊರಡಿಸಿದ್ದು, ವಿಭಿನ್ನ ಸಾಮರ್ಥ್ಯರನ್ನು ಹೊರತುಪಡಿಸಿ ಉಳಿದವರೆಲ್ಲರೂ 55 ಸೆಕೆಂಡುಗಳ ಈ ನಾಡಗೀತೆಯನ್ನು ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. 

‘‘ತಮಿಳ್ ತಾಯ್ ವಝ್ತು’’ ಕೇವಲ ಪ್ರಾರ್ಥನಾ ಗೀತೆ. ಅದು ರಾಷ್ಟ್ರ ಗೀತೆಯಲ್ಲ. ಆದುದರಿಂದ ಅದರ ಗಾಯನದ ವೇಳೆ ಎಲ್ಲರೂ ಎದ್ದು ನಿಲ್ಲುವ ಅಗತ್ಯ ಇಲ್ಲ. ಇದರ ಜೊತೆಗೆ ರಾಜ್ಯ ಸರಕಾರ ಉಲ್ಲೇಖಿಸಿದ ಗೀತೆಗೆ ನಾಡಗೀತೆಯ ಸ್ಥಾನ ಮಾನ ನೀಡಿ ಆದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News