×
Ad

ಜೆಪ್ಪು: ಸೇರಾ ಕೇರ್ ಉಚಿತ ಆರೋಗ್ಯ ಥೆರಪಿ ಕೇಂದ್ರದಿಂದ ಹಾಜಬ್ಬರಿಗೆ ಸನ್ಮಾನ

Update: 2021-12-18 16:11 IST

ಮಂಗಳೂರು, ಡಿ.18: ನಗರದ ಜೆಪ್ಪುವಿನಲ್ಲಿರುವ ಸೇರಾ ಕೇರ್ ಉಚಿತ ಆರೋಗ್ಯ ಥೆರಪಿ ಕೇಂದ್ರದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು.

ಸಾಹಿತಿ ಹುಸೈನ್ ಕಾಟಿಪಳ್ಳ ಅಭಿನಂದನಾ ಭಾಷಣ ಮಾಡಿದರು. ಸೇರಾ ಕೇರ್ ಸಂಸ್ಥೆಯ ಆಡಳಿತ ನಿರ್ದೇಶಕ 

ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ತಾಪಂ ಮಾಜಿ ಸದಸ್ಯ ಎನ್.ಇ.ಮುಹಮ್ಮದ್, ಪಚ್ಚನಾಡಿ ವಾರ್ಡ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಿಂತಿಯಾ ಮಿರಂಡ, ಗಾಯಕಿ ಅನಿತಾ ಡಿಸೋಜ, ಪುರುಷೋತ್ತಮ್, ಕೃಷ್ಣ ಶೆಟ್ಟಿ ಭಾಗವಹಿಸಿದ್ದರು.

ಲಕ್ಷ್ಮಿತಾ, ದಿವ್ಯಾ, ಶುಭಾ, ಐಡಾ, ನಸ್ರಿನ್, ಕಾವ್ಯಾ, ಪ್ರಜ್ಞಾ  ಉಪಸ್ಥಿತರಿದ್ದರು.

ಮುಹಮ್ಮದ್ ಫೈಝ್ ಹಾಜಬ್ಬರ ಗೀತೆಯನ್ನು ಹಾಡಿದರು. ವ್ಯವಸ್ಥಾಪಕಿ ದಿವ್ಯಾ ಕೊಟ್ಟಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News