×
Ad

ಧನಬಾದ್ ನ್ಯಾಯಾಧೀಶರ ಶಂಕಿತ ಹತ್ಯೆ ಪ್ರಕರಣ: ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ಜಾರ್ಖಂಡ್ ಹೈಕೋರ್ಟ್

Update: 2021-12-18 17:59 IST

 ಹೊಸದಿಲ್ಲಿ: ಧನಬಾದ್ ನ್ಯಾಯಾಧೀಶರ ಶಂಕಿತ ಹತ್ಯೆ ಪ್ರಕರಣದ ಕುರಿತಂತೆ ಸಿಬಿಐ ಹಲವು ವರದಿಗಳನ್ನು ಸಲ್ಲಿಸುತ್ತಿದ್ದರೂ ಪ್ರಕರಣಕ್ಕೆ ಸೂಕ್ತ ವಿವರಣೆಯನ್ನು ಅದು ಇನ್ನೂ ಒದಗಿಸದೇ ಇರುವುದಕ್ಕೆ ಜಾರ್ಖಂಡ್ ಹೈಕೋರ್ಟ್ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡಿದೆ.

ಧನಬಾದ್ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಜುಲೈ 28ರಂದು ಮುಂಜಾನೆ ಜಾಗಿಂಗ್ ಹೋಗಿದ್ದ ವೇಳೆ ಆಟೋರಿಕ್ಷಾವೊಂದು ಅವರತ್ತಲೇ ವೇಗವಾಗಿ ಬಂದು ಅವರಿಗೆ ಢಿಕ್ಕಿ ಹೊಡೆದಿತ್ತು.

ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಜಾರ್ಖಂಡ್ ಹೈಕೋರ್ಟ್, "ಸಿಬಿಐ ವರದಿ ಮೇಲೆ ವರದಿ ಸಲ್ಲಿಸುತ್ತಿದೆ ಆದರೆ ಕೊಲೆಯ ಹಿಂದಿನ ಕಾರಣ ಹಾಗೂ ಪ್ರಕರಣದ ಹಿಂದಿದ್ದ ವ್ಯಕ್ತಿಗಳ ಹೆಸರುಗಳನ್ನು ನೀಡಿಲ್ಲ" ಎಂದು ಹೇಳಿದೆ.

ಸಿಬಿಐ ಈ ಪ್ರಕರಣದಲ್ಲಿ ಸಲ್ಲಿಸಿದ ಚಾರ್ಜ್ ಶೀಟ್ ಕಾದಂಬರಿಯಂತಿದ್ದು ಇಬ್ಬರು ಆರೋಪಿಗಳ ವಿರುದ್ಧದ ಕೊಲೆ ಆರೋಪಕ್ಕೆ ಪುರಾವೆಯೊದಗಿಸಲು ವಿಫಲವಾಗಿದೆ ಎಂದು ಅಕ್ಟೋಬರ್ ತಿಂಗಳಿನಲ್ಲಿ ನಡೆದ ವಿಚಾರಣೆ ವೇಳೆ ನ್ಯಾಯಾಲಯ ಹೇಳಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಟೋ ಚಾಲಕ ಲಖನ್ ವರ್ಮ ಮತ್ತು ಆತನ ಸಹಾಯಕ ರಾಹುಲ್ ವರ್ಮ ಎಂಬವರನ್ನು ಬಂಧಿಸಿದ್ದರು.

ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್  ಜಾರ್ಖಂಡ್ ಹೈಕೋರ್ಟ್‍ಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News