ಕುಂದಾಪುರ: ಆ್ಯಂಬುಲೆನ್ಸ್‌ನಲ್ಲಿ ಗಂಡುಮಗುವಿಗೆ ಜನ್ಮ ನೀಡಿದ ಮಹಿಳೆ
ಕುಂದಾಪುರ, ಡಿ.18: ತಾಲೂಕಿನ ಹಾಲಾಡಿಯ 108 ಆ್ಯಂಬುಲೆನ್ಸ್‌ನಲ್ಲಿ ಶನಿವಾರ ಬೆಳಗ್ಗೆ ಮಹಿಳೆಯೊಬ್ಬರ ಹೆರಿಗೆ ಮಾಡಿಸಲಾಯಿತು. ಆ್ಯಂಬುಲೆನ್ಸ್ ನಲ್ಲೇ ಮಹಿಳೆ ಆರೋಗ್ಯಪೂರ್ಣ ಗಂಡು ಮಗುವಿಗೆ ಜನ್ಮ ನೀಡಿದರು.
ಬೆಳಗ್ಗೆ 11:20ರ ಸುಮಾರಿಗೆ ನಂದಿನಿ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಕರೆಸಲಾಯಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಹಾಲಾಡಿಯ 108 ಆ್ಯಂಬುಲೆನ್ಸ್, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತಿದ್ದಾಗ, ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅದು ಹೆಚ್ಚಾದಾಗ ದಾರಿ ಮಧ್ಯದಲ್ಲೇ ಆ್ಯಂಬುಲೆನ್ಸ್ ಒಳಗೆ ಹೆರಿಗೆ ಮಾಡಿಸಲಾಯಿತು.
ಆ್ಯಂಬುಲೆನ್ಸ್‌ನಲ್ಲಿ ಇಎಂಟಿ ನರ್ಸ್ ಪ್ರಶಾಂತ್ ಹಾಗೂ ಪೈಲಟ್ ಗಜಾನನ ಇದ್ದು, ಯಶಸ್ವಿಯಾಗಿ ಹೆರಿಗೆ ಮಾಡಿಸಿ ತತಾಯಿ ಮತ್ತು ಮಗುವನ್ನು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೆದುಕೊಂಡು ಬಂದು ಸೇರಿಸಿದರು. ಬಳಿಕ ಅಲ್ಲಿನ ವೈದ್ಯಾಧಿಕಾರಿಗಳು ತಾಯಿ-ಮಗುವನ್ನು ಪರೀಕ್ಷಿಸಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿಸಿದರು.