ಮನೆಕೆಲಸದವಳಿಗೆ ನಿಂದನೆ: ಭಾರತೀಯ ಮೂಲದ ದಂಪತಿಗೆ ಜೈಲುಶಿಕ್ಷೆ

Update: 2021-12-18 17:02 GMT
ಸಾಂದರ್ಭಿಕ ಚಿತ್ರ

ಸಿಂಗಾಪುರ, ಡಿ.18: ಮನೆ ಕೆಲಸದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ನಿಂದಿಸಿದ್ದಲ್ಲದೆ ನ್ಯಾಯಾಂಗದ ಕಾರ್ಯಕ್ಕೆ ಅಡ್ಡಿಮಾಡಿದ ಆರೋಪದಲ್ಲಿ ಭಾರತ ಮೂಲದ ದಂಪತಿಗೆ ಸಿಂಗಾಪುರದಲ್ಲಿ ಜೈಲುಶಿಕ್ಷೆ ವಿಧಿಸಲಾಗಿದೆ.

ಸಯಿದ್ ಮುಹಮ್ಮದ್ ಪೀರನ್ ಸಯಿದ್ ಅಮೀರ್ ಹಂಝ ಎಂಬ ವ್ಯಕ್ತಿ ಇಂಡೋನೇಶ್ಯಾದ ಮನೆಕೆಲಸದವಳನ್ನು ನೇಮಿಸಿಕೊಳ್ಳಲು ತನ್ನ ವ್ಯಾಪಾರದ ಸಹವರ್ತಿಯ ಗುರುತುಪತ್ರವನ್ನು ಬಳಸಿಕೊಳ್ಳುವ ಮೂಲಕ ಮಾನವಸಂಪನ್ಮೂಲ ಇಲಾಖೆಯ ಕರಿಪಟ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವ ಆರೋಪ ಸಾಬೀತಾಗಿರುವುದರಿಂದ ಅವರಿಗೆ 36 ವಾರಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಅವರ ಪತ್ನಿ ಸಬಾ ಪರ್ವೀನ್ ಗೆ ನ್ಯಾಯಾಂಗದ ಕಾರ್ಯಕ್ಕೆ ಅಡ್ಡಿಯಾದ ಅಪರಾಧದಲ್ಲಿ 3 ದಿನದ ಜೈಲುಶಿಕ್ಷೆ ವಿಧಿಸಲಾಗಿದೆ.

ತನಗೆ ವೇತನ ಪಾವತಿಸಿಲ್ಲ ಎಂದು ಮನೆಕೆಲಸದ ಮಹಿಳೆ ನೀಡಿರುವ ದೂರಿನ ವಿಚಾರಣೆ ಪ್ರತ್ಯೇಕವಾಗಿ ನಡೆಯಲಿದ್ದು ಇದರ ತೀರ್ಪು ಮುಂದಿನ ದಿನದಲ್ಲಿ ಪ್ರಕಟವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News