ಮಂಗಳೂರು : ಫೋರಂ ಫಿಝಾ ಮಾಲ್ ನಲ್ಲಿ ಕ್ರಿಸ್ಮಸ್, ಹೊಸ ವರ್ಷದ ಕೊಡುಗೆ
Update: 2021-12-18 22:39 IST
ಮಂಗಳೂರು : ಫೋರಂ ಫಿಝಾ ಮಾಲ್ ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಗ್ರಾಹಕರಿಗೆ ಖಚಿತವಾದ ಬಹುಮಾನಗಳನ್ನು ಘೋಷಿಸಿದೆ.
ಎಂಡ್ ಆಫ್ ಸೀಸನ್ ಸೇಲ್ ಹಾಗೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಈ ಕೊಡುಗೆ ಇರಲಿದೆ.
ಫೋರಂ ಮಾಲ್ ನಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಬ್ರಾಂಡ್ ಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಹಕ 10,000 ರೂ. ಮೇಲ್ಪಟ್ಟು ಖರೀದಿ ಮಾಡಿದರೆ ಡಿಸ್ಕೌಂಟ್ ಆಫರ್ ಹಾಗೂ ಖಚಿತವಾದ ಬಹುಮಾನಗಳಿವೆ. ಅತಿ ಹೆಚ್ಚು ಖರೀದಿ ಮಾಡಿದ ಗ್ರಾಹಕನಿಗೂ ವಿಶೇಷ ಬಹುಮಾನವಿದೆ ಎಂದು ಪ್ರಕಟಣೆ ತಿಳಿಸಿದೆ.