×
Ad

ಮಂಗಳೂರು : 'ದುಬೈ ಮಾರ್ಕೆಟ್‌‌'ನಲ್ಲಿ ಬೆಂಕಿ ಆಕಸ್ಮಿಕ

Update: 2021-12-19 07:57 IST

ಮಂಗಳೂರು, ಡಿ.19: ನಗರದ ಮಾರ್ಕೆಟ್ ರಸ್ತೆಯ ಸಿಟಿ ಮಾರ್ಕೆಟ್ ‌ಕಟ್ಟಡದಲ್ಲಿರುವ 'ದುಬೈ ಮಾರ್ಕೆಟ್‌'ನಲ್ಲಿ ಇಂದು ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಬೆಂಕಿ ಆಕಸ್ಮಿಕ ಸಂಭವಿಸಿದೆ.

ಮಾರ್ಕೆಟ್‌ನಲ್ಲಿರುವ ಗೋದಾಮು ಸಹಿತ ಎರಡು ‌ಅಂಗಡಿಗಳಲ್ಲಿ ಬೆಂಕಿ ಕಾಣಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಅಗ್ನಿಶಾಮಕ ದಳ ಮತ್ತು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News