'ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್' ಬ್ಯಾರಿ ಸಾಂಸ್ಕೃತಿಕ ತೇರು ಕಾರ್ಯಕ್ರಮ ಉದ್ಘಾಟನೆ
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ಮಂಗಳೂರು ನಗರದ ಉಳ್ಳಾಲದ ಹತ್ತು ಸ್ಥಳಗಳಲ್ಲಿ ಬ್ಯಾರಿ ಜನಪದ, ಕಲೆ, ಸಂಸ್ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಏರ್ಪಡಿಸಿದ ಬ್ಯಾರಿ ಸಾಂಸ್ಕೃತಿಕ ರಥದ ಮೂಲಕ 'ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್ 2021-22' ಎಂಬ ಕಾರ್ಯಕ್ರಮ ಮಂಗಳೂರು ನಗರದ ತಾಲೂಕು ಪಂಚಾಯತ್ ನ ಹೊಸ ಕಟ್ಟಡದ ಎದುರು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್ ದಫ್ ಬಾರಿಸುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಬ್ಯಾರಿ ಸಾಹಿತ್ಯ ಅಕಾಡಮಿಗೆ ಜನರು ಬರಬೇಕಾಗಿಲ್ಲ. ಬ್ಯಾರಿ ಸಾಹಿತ್ಯ ಅಕಾಡೆಮಿಯು ಜನರ ಬಳಿಗೆ ಹೋಗುವ ಮೂಲಕ ತನ್ನ ಪ್ರಾಮಾಣಿಕ ಸೇವೆ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್, ಸಾಮಾಜಿಕ ಕಾರ್ಯಕರ್ತ ಮುಸ್ತಫಾ ತಂಞಳ್, ಖಾಲಿದ್ ನಂದಾವರ, ಜಯ ಭಂಡಾರಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹಸನಬ್ಬ ಮೂಡಬಿದಿರೆ, ಗಾಯಕ ಬಾತಿಶ್ ಪುತ್ತೂರು, ರಾಯಿಸ್ ಕಣ್ಣೂರು ಭಾಗವಹಿಸಿದ್ದರು.
ರಿಜಿಸ್ಟ್ರಾರ್ ಪೂರ್ಣಿಮ ಸ್ವಾಗತಿಸಿದರು. ಸದಸ್ಯ ಸಂಚಾಲಕರಾಗಿ ಅಕಾಡೆಮಿ ಸದಸ್ಯರಾದ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು. ತದನಂತರ ಬ್ಯಾರಿ ಸಾಂಸ್ಕೃತಿಕ ರಥವು ಮಂಗಳೂರು ನಗರದಿಂದ ಉಳ್ಳಾಲ ತಾಲೂಕಿನ ಕೋಟೆಪುರ, ಕೋಡಿ, ಪಟ್ಟಣ ಪಂಚಾಯತ್ ಕಚೇರಿ ಮುಂಭಾಗ, ಮುಕ್ಕಚೇರಿ, ಮಾಸ್ತಿಕಟ್ಟೆ, ಮೇಲಂಗಡಿ, ಹಳೇ ಕೋಟೆ, ಅಲೇಕಳ, ಅಂಬೇಡ್ಕರ್ ಮೈದಾನ (ಒಳಪೇಟೆ ತೊಕ್ಕೊಟ್ಟು) ದಲ್ಲಿ ಸಂಚರಿಸಿತು.