×
Ad

ಕೇಂದ್ರ ಸರಕಾರದ ಮೇಲೆ ಆರೆಸ್ಸೆಸ್ ನಿಯಂತ್ರಣವಿಲ್ಲ: ಮೋಹನ್ ಭಾಗವತ್

Update: 2021-12-19 14:06 IST

ಧರ್ಮಶಾಲಾ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಸರಕಾರದ ಮೇಲೆ ಸಂಘದ ನಿಯಂತ್ರಣವಿಲ್ಲ.  ಅವರು ವಿಭಿನ್ನ ಕಾರ್ಯನಿರ್ವಾಹಕರು, ವಿಭಿನ್ನ ನೀತಿಗಳು, ವಿಭಿನ್ನ ಕಾರ್ಯ ವಿಧಾನಗಳನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ.

ಆಲೋಚನೆಗಳು ಹಾಗೂ  ಸಂಸ್ಕೃತಿ ಸಂಘದ್ದು ಹಾಗೂ  ಅದು ಪರಿಣಾಮಕಾರಿಯಾಗಿದೆ. ಅಲ್ಲಿ (ಸರಕಾರದಲ್ಲಿ) ಕೆಲಸ ಮಾಡುತ್ತಿರುವ ಪ್ರಮುಖರು ಸಂಘಕ್ಕೆ ಸೇರಿದವರು  ಹಾಗೂ  ಹಾಗೆಯೇ ಉಳಿಯುತ್ತಾರೆ. ಅಂತಹ ಸಂಬಂಧ ಮಾತ್ರ ಇದೆ.  ಮಾಧ್ಯಮಗಳು  ಹೇಳುವಂತೆ 'ಡೈರೆಕ್ಟ್ ರಿಮೋಟ್ ಕಂಟ್ರೋಲ್' ಯಾವುದೂ ಇಲ್ಲ. ಕೇಂದ್ರ ಸರಕಾರದ ಮೇಲೆ ಆರೆಸ್ಸೆಸ್  ಅಂತಹ ನಿಯಂತ್ರಣ ಹೊಂದಿಲ್ಲ" ಎಂದು ಅವರು ಒತ್ತಿ ಹೇಳಿದರು.

ಧರ್ಮಶಾಲಾದಲ್ಲಿ ಮಾಜಿ ಸೈನಿಕರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಭಾಗವತ್ ಈ ಹೇಳಿಕೆ ನೀಡಿದ್ದಾರೆ.

ತಮಿಳುನಾಡಿನ ಕುನ್ನೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ  12 ಸಶಸ್ತ್ರ ಪಡೆಗಳ ಸಿಬ್ಬಂದಿಯ ನಿಧನಕ್ಕೆ ಅವರು ಸಂತಾಪ ವ್ಯಕ್ತಪಡಿಸಿ ಒಂದು ನಿಮಿಷ ಮೌನ ಆಚರಿಸಿದರು.

ಶನಿವಾರ ಸಂಜೆ ಧರ್ಮಶಾಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಮಾಜಿ ಸೈನಿಕರು ಭಾಗವಹಿಸಿದ್ದರು. ಆರೆಸ್ಸೆಸ್ ಮುಖ್ಯಸ್ಥರು ಸಂಘದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News