ರಜತ್‌ಗೆ ಕರಾಟೆಯಲ್ಲಿ ಚಿನ್ನದ ಪದಕ
Update: 2021-12-19 18:05 IST
ಮಂಗಳೂರು, ಡಿ.19: ನಗರದ ಭಾರತೀಯ ವಿದ್ಯಾಭವನದಲ್ಲಿ ರವಿವಾರ ನಡೆದ 32ನೇ ರಾಜ್ಯಮಟ್ಟದ ಅಂತರ್ ಡೋಜೋ ಕರಾಟೆ ಚಾಂಪಿಯನ್ ಶಿಪ್‌ನ ಬ್ಲೂ ಆ್ಯಂಡ್ ಪರ್ಪಲ್ ಬೆಲ್ಟ್ 14ರಿಂದ 16 ವರ್ಷ ಪ್ರಾಯದ ವಿಭಾಗದಲ್ಲಿ ಬಿಜಿಎಸ್ ಪ್ರೌಢಶಾಲೆಯ ವಿದ್ಯಾರ್ಥಿ ರಜತ್ ಕೊಂಚಾಡಿ ಚಿನ್ನದ ಪದಕ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.
ಲೇಖಕ ಕಾ.ವೀ.ಕೃಷ್ಣದಾಸ್-ಲತಾ ದಂಪತಿಯ ಪುತ್ರನಾಗಿರುವ ರಜತ್, ಕೊಂಚಾಡಿಯ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲಾಯ್ಡ್ ಆರ್ಟ್ಸ್ ಡೋಜೋ ವಿದ್ಯಾರ್ಥಿ.