×
Ad

ಮಣಿಪಾಲ ಕೆಎಂಸಿಗೆ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಪ್ರಶಸ್ತಿ

Update: 2021-12-19 18:48 IST

ಮಣಿಪಾಲ, ಡಿ.19: ಮಣಿಪಾಲಕಸ್ತೂರ್ಬಾ ಆಸ್ಪತ್ರೆ ಆಶ್ರಯದಲ್ಲಿ ಮೊದಲ ಬಾರಿಗೆ ಕಾರ್ಪೊರೇಟ್ ಕಂಪನಿ, ಬ್ಯಾಂಕ್, ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮವರಿಗಾಗಿ ಏರ್ಪಡಿಸಲಾದ ಮೂರು ದಿನಗಳ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಸಿಸಿಎಲ್) ಪ್ರಶಸ್ತಿಯನ್ನು ಮಣಿಪಾಲ ಕೆಎಂಸಿ ತಂಡ ಗೆದ್ದು ಕೊಂಡಿದೆ.

ಈ ಪಂದ್ಯಾಟದಲ್ಲಿ ಮಾಹೆ ಮಣಿಪಾಲ ರನ್ನರ್ಸ್‌ ಅಪ್ ಪ್ರಶಸ್ತಿ ಪಡೆದು ಕೊಂಡಿತು. ಅವಿನಾಶ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ವಿನಯ್ ಪಂದ್ಯ ಶ್ರೇಷ್ಠ, ವಿಘ್ನೇಶ್ ಉತ್ತಮ ದಾಂಡಿಗ ಮತ್ತು ವಿನಯ್ ಉತ್ತಮ ದಾಳಿಗಾರ ಪ್ರಶಸ್ತಿ ತನ್ನದಾಗಿಸಿದರು.

ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹು ಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಕೆ.ಕೆ.ಫಿಶ್‌ನೆಟ್ಸ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಬಾಳಿಗಾ ಮಾತನಾಡಿ, ಇಂತಹ ಕ್ರೀಡಾಕೂಟಗಳು ಸಂಸ್ಥೆಗಳ ನಡುವೆ ಸ್ನೇಹದ ಸೇತುವೆಯಾಗಲಿದೆ ಎಂದರು.

ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ.ಪಿ.ಎಲ್.ಎನ್.ಜಿ.ರಾವ್ ಮಾತನಾಡಿದರು. ಕೆಎಂಸಿ ಡೀನ್ ಡಾ.ಶರತ್ ಕೆ.ರಾವ್, ಕಸ್ತೂರ್ಬಾ ಆಸ್ಪತ್ರೆಯ ಸಿಒಒ ಸಿ.ಜಿ.ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಉಪಸ್ಥಿತರಿ ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News