×
Ad

ಸಾಸ್ತಾನ, ಬ್ರಹ್ಮಾವರ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ

Update: 2021-12-19 18:57 IST

ಬ್ರಹ್ಮಾವರ, ಡಿ.19: ಕಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ಸಾಸ್ತಾನ ಘಟಕದ ಸಹಯೋಗ ದಲ್ಲಿ ಕ್ರಿಸ್ಮಸ್ ಸಂಭ್ರಮವನ್ನು ಶನಿವಾರ ಸಾಸ್ತಾನದ ನಿತ್ಯ ಸಹಾಯ ಮಾತಾ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ಮಾತನಾಡಿ, ಹಿರಿಯರು ವೃದ್ಧರೊಂದಿಗೆ ಕ್ರಿಸ್ಮಸ್ ಆಚರಿಸುವುದ ರೊಂದಿಗೆ ಅವರ ಮುಖದಲ್ಲಿ ನಗುವನ್ನು ಕಾಣುವುದೇ ನಿಜವಾದ ಸಂಭ್ರಮ. ಇಡೀ ವಿಶ್ವವೇ ಜಾತಿ ಮತಗಳ ಬೇದವಿಲ್ಲದೆ ಆಚರಿಸುವ ಕ್ರಿಸ್ಮಸ್ ಹಬ್ಬದ ತಿರುಳಿರುವುದು ಶಾಂತಿ, ಪ್ರೀತಿ ಹಾಗೂ ದೀನತೆಯ ಸಂದೇಶದಲ್ಲಿ. ಇದೇ ಶಾಂತಿ ಪ್ರೀತಿ ಸಹನೆ ದೀನತೆ ನಮ್ಮ ಪ್ರತಿ ದಿನವನ್ನೂ ಹಬ್ಬವಾಗಿ ಮಾರ್ಪಡಿಸಲಿ ಎಂದು ಹಾರೈಸಿದರು.

ಈ ವೇಳೆ ಸಂಘಟನೆಯ ವತಿಯಿಂದ ವೃದ್ಧಾಶ್ರಮದ ನಿವಾಸಿಗಳಿಗೆ ಕ್ರಿಸ್ಮಸ್ ತಿಂಡಿ ಕುಸ್ವಾರನ್ನು ವಿತರಿಸಲಾಯಿತು. ಸಾಸ್ತಾನ ಘಟಕದ ಗಾಯನ ಮಂಡಳಿಯ ಸದಸ್ಯರು ಕ್ರಿಸ್ಮಸ್ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಮೇರಿ ಡಿಸೋಜ ವಹಿಸಿದ್ದರು.

ನಿತ್ಯ ಸಹಾಯ ಮಾತಾ ವೃದ್ಧಾಶ್ರಮದ ಸಿಸ್ಟರ್ ಬ್ಲಾಂದಿನಾ, ಸ್ಥಳೀಯ ಜೀಜಸ್ ಮೇರಿ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಗೊರೆಟ್ಟಿ, ಕಥೊಲಿಕ್ ಸಭಾ ಉಡುಪಿ ಪ್ರದೇಶ ಪ್ರಧಾನ ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜ, ಸಾಸ್ತಾನ ಘಟಕದ ಅಧ್ಯಕ್ಷ ಸಿಂತಿಯಾ ಡಿಸೋಜ, ಕಾರ್ಯದರ್ಶಿ ಜಾನೆಟ್ ಬಾಂಜ್, ಕೇಂದ್ರಿಯ ಸಮಿತಿಯ ಪದಾಧಿಕಾರಿಗಳಾದ ಎಲ್ರೋಯ್ ಕಿರಣ್ ಕ್ರಾಸ್ತಾ, ವಲೇರಿ ಯನ್ ಫೆರ್ನಾಂಡಿಸ್, ಸಂತೋಷ್ ಕರ್ನೆಲಿಯೊ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಬ್ರಹ್ಮಾವರದ ಕರುಣಾಲಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಕ್ರಿಸ್ಮಸ್ ಆಚರಣೆ ನಡೆಸಿ ಅಲ್ಲಿನ ಆಶ್ರಮವಾಸಿಗಳಿಗೆ ಅಗತ್ಯವಿರುವ ವೀಲ್ ಚೆಯರ್ ಮತ್ತು ವಾಕರ್ ಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News