×
Ad

ಕುಪ್ಪೆಪದವು: ರಕ್ತದಾನ ಶಿಬಿರ

Update: 2021-12-19 20:20 IST

ಮಂಗಳೂರು, ಡಿ.19: ಫ್ರೆಂಡ್ಸ್ ಕುಪ್ಪೆಪದವು, ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್‌ಆರ್‌ಎಸ್) ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಹಾಗೂ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಬ್ಲಡ್‌ ಬ್ಯಾಂಕ್ ಮಂಗಳೂರು ಇವುಗಳ ಸಹಭಾಗಿತ್ವದಲ್ಲಿ ದಿ. ಅವಿನಾಶ್ ಆಳ್ವ ಸ್ಮರಣಾರ್ಥ ಲ್ಯುಕೇಮಿಯಾದಿಂದ ಬಳಲುತ್ತಿರುವ ಅಬ್ದುಲ್ ರಝಾಕ್ ಸಹಾಯಾರ್ಥ ಕುಪ್ಪೆಪದವಿನ ಆಶಾಕಿರಣ ಚರ್ಚ್ ಹಾಲ್ನಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು.

ಸಾಮಾಜಿಕ ಕಾರ್ಯಕರ್ತ ಮುನೀರ್ ನಡುಪಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಜ್ಪೆಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಉದ್ಘಾಟಿಸಿದರು.

ಅತಿಥಿಗಳಾಗಿ ಮಿಥುನ್ ರೈ, ಖತೀಬರಾದ ಶಾಫಿ ಮದನಿ ಕರಾಯ, ಝೈನುದ್ದೀನ್ ಮಕ್ದೂಮ್ ಅನ್ಸಾರಿ, ಅರ್ಚಕ ಸದಾಶಿವ ಕಾರಂತ್, ರೆ.ಫಾ. ಗ್ರೇಷನ್, ಗಿರೀಶ್ ಆಳ್ವ, ಅಬ್ದುಲ್ ಗಫೂರ್ ಕುಳಾಯಿ, ಸಿರಾಜುದ್ದೀನ್ ಪರ್ಲಡ್ಕ, ಕುಪ್ಪೆಪದವು ಗ್ರಾಪಂ ಆಧ್ಯಕ್ಷ ಡಿ.ಪಿ.ಹಮ್ಮಬ್ಬ, ಮುತ್ತೂರು ಗ್ರಾಪಂ ಅಧ್ಯಕ್ಷ ಸತೀಶ್ ಬಳ್ಳಾಜೆ, ಮುಫೀದ್ ಅಡ್ಯಾರ್, ಪುರುಷೋತ್ತಮ್ ಸಮಾಗಮ, ನೌಷಾದ್ ಹಾಜಿ ಸುರಲ್ಪಾಡಿ ಉಪಸ್ಥಿತರಿದ್ದರು.

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಅರ್ಜುನ್ ಭಂಡಾರ್ಕರ್ ಹಾಗೂ ಸತ್ತಾರ್ ಗೂಡಿನ ಬಳಿ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News