×
Ad

ಸರಕಾರಿ ಬಸ್ ಪುನರಾರಂಭಿಸಲು ಡಿವೈಎಫ್‌ಐ ಮನವಿ

Update: 2021-12-19 20:48 IST

ಮಂಗಳೂರು, ಡಿ.19: ನಗರದ ಸ್ಟೇಟ್‌ಬ್ಯಾಂಕ್‌ನಿಂದ ಬಜಾಲ್, ಜಲ್ಲಿಗುಡ್ಡ, ಫೈಸಲ್ ನಗರ ನಡುವೆ ಸಂಚರಿಸುತ್ತಿದ್ದ ಎರಡು ಸರಕಾರಿ ಬಸ್ಸನ್ನು ಪುನರಾರಂಭಿಸುವಂತೆ ಡಿವೈಎಫ್‌ಐ ಬಜಾಲ್ ಘಟಕ ಮನವಿ ಸಲ್ಲಿಸಿತು.

ಕೋವಿಡ್-ಲಾಕ್‌ಡೌನ್ ಅವಧಿಯಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ ಕಾರಣ ಸಾಕಷ್ಟು ಸಮಸ್ಯೆಯಾಗಿದೆ. ಹಾಗಾಗಿ ಬಸ್ ಸಂಚಾರವನ್ನು ಪುನಃ ಆರಂಭಿಸಬೇಕು ಎಂದು ಆಗ್ರಹಿಸಿತು.

ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್‌ಐ ಬಜಾಲ್ ಘಟಕದ ಕಾರ್ಯದರ್ಶಿ ಧೀರಜ್ ಬಜಾಲ್, ದೀಪಕ್ ಬಜಾಲ್, ಜಗದೀಶ್ ಬಜಾಲ್, ವರಪ್ರಸಾದ್, ಪ್ರವೀಣ್ ಬಜಾಲ್, ನಾಗರಾಜ್, ನವೀನ್ ನಾಯಕ್, ಮುಸ್ತಫಾ ಕಲ್ಲಕಟ್ಟೆ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News