ತೆಂಕುಬಿರ್ತಿ: ಹೋರಾಟಗಾರ್ತಿ ನೇಮಿಚಂದ್ರಗೆ ನುಡಿನಮನ
ಬ್ರಹ್ಮಾವರ, ಡಿ.19: ತೆಂಕುಬಿರ್ತಿ ಅಂಬೇಡ್ಕರ್ ಯುವಕ ಮಂಡಲ ವತಿ ಯಿಂದ ಇತ್ತೀಚೆಗೆ ಅಗಲಿದ ಹೋರಾಟಗಾರ್ತಿ ಬೆಳಗಾವಿಯ ನೇಮಿಚಂದ್ರ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮುಖ್ಯ ವ್ಯವಸ್ಥಾಪಕ ಬಿರ್ತಿ ವಿಠಲ, ನೇಮಿ ಚಂದ್ರ ಅವರ ಭಾವಚಿತ್ರಕ್ಕೆ ಹೂ ಹಾರ ಹಾಕಿ ಪುಷ್ಫಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪ್ರಗತಿಪರ ಚಿಂತಕ ದಿನಕರ ಬೆಂಗ್ರೆ ಮಾತನಾಡಿ, ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ, ಇಡೀ ರ್ನಾಟಕದಾದ್ಯಂತ ಚಳುವಳಿ ಯಲ್ಲಿ ಪಾಲ್ಗೊಂಡು ಜನ ಸಂಘಟಿಸಿ ಹೋರಾಟ ರೂಪಿಸಿದರು. ಅದರಲ್ಲೂ ಕೊಡಗಿನ ದಿಡ್ಡಳ್ಳಿಯಲ್ಲಿ ಆದಿವಾಸಿ ಜನರಗಳೊಂದಿಗೆ ಹಲವಾರು ದಿನಗಳವರೆಗೆ ವಾಸಿಸಿ ಅವರಲ್ಲಿ ಧೈರ್ಯ, ವಿಶ್ವಾಸ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪ್ರಗತಿಪರ ಚಿಂತಕ ದಿನಕರ ಬೆಂಗ್ರೆ ಮಾತನಾಡಿ, ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ, ಇಡೀ ಕರ್ನಾಟಕದಾದ್ಯಂತ ಚಳುವಳಿ ಯಲ್ಲಿ ಪಾಲ್ಗೊಂಡು ಜನ ಸಂಘಟಿಸಿ ಹೋರಾಟ ರೂಪಿಸಿದರು. ಅದರಲ್ಲೂ ಕೊಡಗಿನ ದಿಡ್ಡಳ್ಳಿಯಲ್ಲಿ ಆದಿವಾಸಿ ಜನರಗಳೊಂದಿಗೆ ಹಲವಾರು ದಿನಗಳವರೆಗೆ ವಾಸಿಸಿ ಅವರಲ್ಲಿ ಧೈರ್ಯ, ವಿಶ್ವಾಸ, ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿದರು ಎಂದು ತಿಳಿಸಿದರು.
ದಲಿತ ಮುಖಂಡ ಶ್ಯಾಮರಾಜ್ ಬಿರ್ತಿ ಮಾತನಾಡಿ, ನಮ್ಮ ತುಮಕೂರು ಚಲೋ, ಗುಡಿಬಂಡೆ ಚಲೋ, ಮಡಿಕೇರಿ ಚಲೋ, ಉಡುಪಿ ಚಲೋ, ಬಿಜಾಪುರ ಚಲೋ ಹೀಗೇ ಎಲ್ಲಾ ಚಲೋಗಳಲ್ಲೂ ನಮ್ಮೊಂದಿಗೆ ಹೋರಾಟ ಕಿಚ್ಚಿನ ಚಿಲುಮೆಯಾಗಿ ಭಾಗವಹಿಸಿದ್ದರು. ನೇಮಿಚಂದ್ರ ಅದರಲ್ಲೂ ಉಡುಪಿ ಚಲೋದಲ್ಲಿ ಇಡೀ ಉಡುಪಿಯ ಬೀದಿಗಳನ್ನು ನೀಲಿಮಯ ಮಾಡಲು ಒಂದು ವಾರ ಶ್ರಮಪಟ್ಟಿದ್ದರು. ಎಲ್ಲ ಪ್ರಗತಿಪರ ಸಂಘಟನೆಯ ಚಳುವಳಿಗಳಲ್ಲೂ ನೇಮಿಯದ್ದು ಮಹತ್ವದ ಪಾತ್ರ ಇತ್ತು ಎಂದರು.
ವರದರಾಜ್ ಬಿರ್ತಿ, ನೇಮಿಚಂದ್ರ ಅವರ ಕುರಿತು ತಾವೇ ರಚಿಸಿ ಸ್ವರ ಸಂಯೋಜನೆ ಮಾಡಿದ ಗೀತೆಯನ್ನು ಬಿರ್ತಿಯ ಪ್ರಶಾಂತ್ ಬಿರ್ತಿ ಮತ್ತು ಸಂಗಡಿಗರು ಹಾಡಿದರು. ಬಿರ್ತಿ ಸುರೇಶ, ಸುಬ್ರಹ್ಮಣ್ಯ ಪ್ರಸಾದ್, ಸುಧಾಕರ ಗುಜ್ಜರಬೆಟ್ಟು, ವಾಸು ನೇಜಾರು, ಹರೀಶ್ ಚಂದ್ರ ಕುಮಾರ್, ಶಿವಾನಂದ ಬಿರ್ತಿ, ಅನಿಲ್ ಬಿರ್ತಿ, ಚೈತನ್ಯ ಬಿರ್ತಿ ಉಪಸ್ಥಿತರಿದ್ದರು.