×
Ad

ಪುತ್ತೂರು : 'ಮುಸಾಬಕ 2021' ಕಲಾ ಸಾಹಿತ್ಯ ಸ್ಪರ್ಧೆ ಉದ್ಘಾಟನೆ

Update: 2021-12-19 22:39 IST

ಪುತ್ತೂರು :  ಪುತ್ತೂರು ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್  ಹಾಗೂ ಮದ್ರಸ ಮೆನೇಜ್ ಮೆಂಟ್ ಎಸೋಸಿಯೇಶನ್ ಇದರ ವತಿಯಿಂದ ಪುತ್ತೂರು ರೇಂಜ್ ಮಟ್ಟದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಮುಸಾಬಕ 2021 ಕಾರ್ಯಕ್ರಮವು ಶನಿವಾರ ಪರ್ಲಡ್ಕ ಜುಮಾ ಮಸೀದಿ ವಠಾರದಲ್ಲಿ ಉದ್ಘಾಟನೆಗೊಂಡಿತು.

ಪರ್ಲಡ್ಕ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಧ್ವಜಾರೋಹಣ ಗೈದರು. ದ.ಕ.ಜಿಲ್ಲಾ ಮದ್ರಸ ಮೆನೇಜ್ ಮೆಂಟ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪರ್ಲಡ್ಕ  ಹಯಾತುಲ್ ಇಸ್ಲಾಂ ಮದ್ರಸ ಮುಖ್ಯ ಶಿಕ್ಷಕ ಜಲಾಲುದ್ದೀನ್ ದಾರಿಮಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಆರ್.ಪಿ. ಅಬ್ದುಲ್ ರಝಾಕ್ ಪಡೀಲ್, ರೇಂಜ್ ಅಧ್ಯಕ್ಷ ಅಬ್ದುಲ್ ಕರೀಂ ದಾರಿಮಿ, ಪಾರೂಕ್ ನಿಶ್ಮ, ಬಶೀರ್, ಇಬ್ರಾಹಿಂ, ನೌಶಾದ್ ಹಾಜಿ, ಹನೀಫ್ ದಾರಿಮಿ, ಇಬ್ರಾಹಿಂ ಬಾತಿಷ್ ವಳತ್ತಡ್ಕ, ಶಾಫಿ ಮುಸ್ಲಿಯಾರ್, ಶಂಸುದ್ದೀನ್ ಹನೀಫಿ, ಬಶೀರ್ ದಾರಿಮಿ, ಸುಲೈಮಾನ್ ದಾರಿಮಿ, ಹನೀಫ್ ಮುಸ್ಲಿಯಾರ್, ಯೂಸುಫ್ ಫೈಝಿ, ಉಸ್ಮಾನ್ ಮುಸ್ಲಿಯಾರ್, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ತ್ವಾಹಾ ಮೊದಲಾದವರು ಉಪಸ್ಥಿತರಿದ್ದರು.

ಶಾಕಿರ್ ಮುಸ್ಲಿಯಾರ್ ಸ್ವಾಗತಿಸಿ, ಮುಸ್ತಫಲ್ ಫೈಝಿ ವಂದಿಸಿದರು. ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News