ಕ್ಷಿಪ್ರ ವೇಗದಲ್ಲಿ ಹರಡುತ್ತಿದೆ ಒಮೈಕ್ರಾನ್ ವೈರಸ್ ಕೋವಿಡ್ ಪ್ರಭೇದ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

Update: 2021-12-19 17:59 GMT
ಸಾಂದರ್ಭಿಕ ಚಿತ್ರ

ಜಿನೇವಾ,ಡಿ.19: ಜಗತ್ತಿನ 89 ರಾಷ್ಟ್ರಗಳಲ್ಲಿ ಒಮೈಕ್ರೊನ್ ಪ್ರಭೇದದ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಸಾಮುದಾಯಿಕ ಸೋಂಕು ಹರಡುವ ಭೀತಿಯಿರುವ ಪ್ರದೇಶಗಳಲ್ಲಿ 1.5ರಿಂದ 3 ದಿನಗಳ ಅವಧಿಯಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ) ಎಂದು ಶನಿವಾರ ತಿಳಿಸಿದೆ.

ಸಾಮುದಾಯಿಕವಾಗಿ ರೋಗನಿರೋಧಕ ಶಕ್ತಿ ಅಧಿಕ ಮಟ್ಟದಲ್ಲಿರುವ ರಾಷ್ಟ್ರಗಳಲ್ಲಿಯೂ ಒಮೈಕ್ರಾನ್ ತ್ವರಿತವಾಗಿ ಹರಡುತ್ತಿದೆ. ಆದರೆ ಒಮೈಕ್ರಾನ್‌ಗೆ ರೋಗನಿರೋಧಕ ಶಕ್ತಿಯನ್ನು ಭೇದಿಸುವ ಸಾಮರ್ಥ್ಯವಿದೆಯೇ ಅಥವಾ ಅದರ ಹರಡುವಿಕೆ ಸಾಮರ್ಥ್ಯವು ಹೆಚ್ಚಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆದಾಗ್ಯೂ ವೈದ್ಯಕೀಯವಾಗಿ ಒಮೈಕ್ರಾನ್ ವೈರಸ್ ನ ತೀವ್ರತೆಯ ಬಗೆಗೆ ಈಗಲೂ ಸೀಮಿತವಾದ ದತ್ತಾಂಶಗಳು ಲಭ್ಯವಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ವೈರಸ್ ಸೋಂಕಿನ ತೀವ್ರತೆಯ ಮತ್ತು ಲಸಿಕಾಕರಣವು ಈ ವೈರಸ್ ನ ತೀವ್ರತೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬಿತ್ಯಾದಿ ವಿವರಗಳನ್ನು ತಿಳಿದುಕೊಳ್ಳಲು ಇನ್ನೂ ಹೆಚ್ಚಿನ ದತ್ತಾಂಶಗಳ ಅಗತ್ಯವಿದೆ ಎಂದು ಅದು ಹೇಳಿದೆ.

ಒಮೈಕ್ರಾನ್ ತ್ವರಿತವಾಗಿ ಹರಡುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ ಎಂದು ಮೂಲಗಳು ತಿಳಿಸಿವೆ. ‘‘ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕದ ಆಸ್ಪತ್ರೆಗಳಲ್ಲಿ ಸೋಂಕಿತರ ದಾಖಲಾತಿಯು ಹೆಚ್ಚುತ್ತಲೇ ಹೋಗುತ್ತಿದೆ. ಸೋಂಕು ರೋಗದ ಪ್ರಕರಣಗಳ ತ್ವರಿತ ಏರಿಕೆಯನ್ನು ಗಮನಿಸಿದರೆ, ಹಲವಾರು ಆರೋಗ್ಯಪಾಲನಾ ವ್ಯವಸ್ಥೆಗಳು ತ್ವರಿತವಾಗಿ ಸೋಂಕಿತರಿಂದ ಕಿಕ್ಕಿರಿದು ತುಂಬುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News