ಇಂಡೊನೇಶ್ಯ: ಸೆಮೇರು ಪರ್ವತದಲ್ಲಿ ಮತ್ತೆ ಜ್ವಾಲಾಮುಖಿ ಸ್ಪೋಟ

Update: 2021-12-19 18:23 GMT
ಸಾಂದರ್ಭಿಕ ಚಿತ್ರ:PTI

ಜಕಾರ್ತ,ಡಿ.19: ಇಂಡೊನೇಶ್ಯದ ಜಾವಾ ದ್ವೀಪದಲ್ಲಿರುವ ಸೆಮೇರು ಜ್ವಾಲಾಮುಖಿ ಪರ್ವತವು ರವಿವಾರ ಮುಂಜಾನೆ ಸ್ಫೋಟಿಸಿದ್ದು, 2 ಕಿ.ಮೀ.ನಷ್ಟು ಎತ್ತರದ ಬೂದಿಯನ್ನು ಚಿಮ್ಮಿಸಿದೆ. ಜ್ವಾಲಾಮುಖಿಯ ಸ್ಫೋಟದ ವಲಯದಿಂದ ದೂರವಿರುವಂತೆ ಆಡಳಿತವು ಜನರಿಗೆ ಎಚ್ಚರಿಕೆ ನೀಡಿದೆ.

ಜಾವಾದ ಅತಿ ದೊಡ್ಡ ಪರ್ವತವಾದ ಸೆಮೇರು ಈ ತಿಂಗಳ ಆರಂಭದಲ್ಲಿಯೂ ಸ್ಫೋಟಿಸಿದ್ದು ಭಾರೀ ಪ್ರಮಾಣದಲ್ಲಿ ಲಾವಾರಸವನ್ನು ಹಾಗೂ ಬೂದಿಯನ್ನು ಹೊರಹಾಕಿತ್ತು. ಜ್ವಾಲಾಮುಖಿ ಸ್ಫೋಟದಿಂದಾಗಿ ಪರ್ವತದ ಆಸುಪಾಸಿನ ಪ್ರದೇಶಗಳಲ್ಲಿ ನೆಲೆಸಿದ್ದ ಕನಿಷ್ಠ 46 ಮಂದಿ ಸಾವನ್ನಪ್ಪಿದ್ದರು ಹಾಗೂ ಸಾವಿರಾರು ಮಂದಿಯನ್ನು ಸ್ಥಳಾಂತರಗೊಳಿಸಲಾಗಿತ್ತು.

ರವಿವಾರ ಮುಂಜಾನೆ ಸೆಮೇರು ಪರ್ವತದಲ್ಲಿ ಮತ್ತೆ ಜ್ವಾಲಾಮುಖಿ ಸ್ಪೋಟಿಸಿದ ಬಳಿಕು ಸೆಮೇರು ಪರ್ವತದ 5 ಕಿ.ಮೀ.ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಸ್ಥಳೀಯರಿಗೆ ಇಂಡೊನೇಶ್ಯದ ಜ್ವಾಲಾಮುಖಿ ಅಧ್ಯಯನ ಶಾಸ್ತ್ರ ಹಾಗೂ ಭೌಗೋಳಿಕ ಅಪಾಯ ನಿವಾರಣಾ ಕೇಂದ್ರ (ಪಿವಿಎಂಬಿಜಿ)ದ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News